ಮೂಡುಬಿದಿರೆ: ಗಾಳಿ-ಮಳೆಗೆ ಪತ್ರಕತ೯ ಜಗದೀಶ್ ಪೂಜಾರಿ ಮನೆಗೆ ಹಾನಿ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ: ಗಾಳಿ-ಮಳೆಗೆ ಪತ್ರಕತ೯ ಜಗದೀಶ್ ಪೂಜಾರಿ ಮನೆಗೆ ಹಾನಿ

ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲಿನಲ್ಲಿ ಪತ್ರಕರ್ತ ಜಗದೀಶ್ ಪೂಜಾರಿ ಅವರ ಮನೆಯ ಮೇಲೆ ಸೋಮವಾರ ರಾತ್ರಿ ಮರವೊಂದು ಬಿದ್ದು ಮನೆಯು ಭಾಗಶಃ ಹಾನಿಗೊಳಗಾಗಿದೆ.

ರಾತ್ರಿ ಸುರಿದ ಗಾಳಿ-ಮಳೆಯ ತೀವ್ರತೆಗೆ ಮನೆಯ ಸಮೀಪದಲ್ಲಿದ್ದ ಮರವೊಂದು ಉರುಳಿ ಮನೆಯ ಮೇಲ್ಛಾವಣಿಗೆ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. 

ಗ್ರಾಮ ಆಡಳಿತ ಅಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Post a Comment

0 Comments