ಶನಿವಾರ ರಾತ್ರಿ ನಾಯಿಯನ್ನು ತಿಂದ ಚಿರತೆ ಭಾನುವಾರ ಬೆಳಿಗ್ಗೆ ಬೋನಿನಲ್ಲಿ ಸೆರೆ

ಶನಿವಾರ ರಾತ್ರಿ ನಾಯಿಯನ್ನು  ತಿಂದ ಚಿರತೆ ಭಾನುವಾರ ಬೆಳಿಗ್ಗೆ ಬೋನಿನಲ್ಲಿ ಸೆರೆ

ಮೂಡುಬಿದಿರೆ : ಎಡಪದವಿನ ನಲ್ಯೆ ದಿವಾರ್ ಸೀತಾಂಬೆಟ್ಟು ನಿವಾಸಿ  ಲೋಕೇಶ್ ಅವರ ಮನೆಯ ನಾಯಿಯನ್ನು ಚಿರತೆಯೊಂದು ತಿಂದಿದ್ದು, ಭಾನುವಾರ ಬೆಳಗ್ಗೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

 ಕಳೆದ ಕೆಲವು ದಿನಗಳಿಂದ ನಲ್ಯೆ ಪರಿಸರದಲ್ಲಿ ಚಿರತೆಯೊಂದು ತಿರುಗಾಡುತ್ತಿದ್ದು ನಾಯಿ ಹಾಗೂ ದನಗಳನ್ನು ತಿನ್ನುತ್ತಿರುವ ಬಗ್ಗೆ  ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಚಿರತೆಯನ್ನು    ಹಿಡಿಯಲು ಇಲಾಖೆಯ ಅಧಿಕಾರಿಗಳು ಚಿರತೆಯನ್ನು  ಇರಿಸಿದ್ದರು. 
ಶನಿವಾರ ರಾತ್ರಿ ಈ ಪರಿಸರದಲ್ಲಿ  ಓಡಾಡಿಕೊಂಡು ನಾಯಿಯನ್ನು ತಿಂದು ಹಾಕಿತ್ತು. ಬೆಳಿಗ್ಗೆ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು.

Post a Comment

0 Comments

Advertisement