ಚಾಲಕನ ನಿದ್ದೆ ಮಂಪರು : ರಸ್ತೆ ಬದಿಯ ಕಂಬಕ್ಕೆ ಕಾರು ಡಿಕ್ಕಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಚಾಲಕನ ನಿದ್ದೆ ಮಂಪರು : ರಸ್ತೆ ಬದಿಯ ಕಂಬಕ್ಕೆ ಕಾರು ಡಿಕ್ಕಿ

ಮೂಡುಬಿದಿರೆ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿರುದ್ಧ ದಿಕ್ಕಿಗೆ ಚಲಿಸಿ ರಸ್ತೆ ಬದಿಯ ಸೈಡ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿತೋಟ ಕ್ರಾಸ್ ಬಳಿ ಭಾನುವಾರ ಸಂಜೆ   ನಡೆದಿದೆ. 

 ಪಾಲಡ್ಕದಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದಾಗ ಕಾರಿನ ಚಾಲಕ ನಿದ್ದೆ ಮಂಪರಿಗೆ ಜಾರಿದ್ದು ಈ ಸಂದಭ೯ ನಿಯಂತ್ರಣ ಕಳೆದುಕೊಂಡು ಕಾರು ವಿರುದ್ಧ ದಿಕ್ಕಿಗೆ ಚಲಿಸಿ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ರಸ್ತೆ ಬದಿಯ ಆಳವಾದ ಕಂದಕಕ್ಕೆ ಕಾರು ಉರುಳುವುದು ತಪ್ಪಿದೆ.  ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಕಂಬವೇ ರಕ್ಷಣಾ ಕವಚವಾದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ವೇಳೆ ವಿರುದ್ಧ ದಿಕ್ಕಿನಿಂದ ಕಾರು ಬರುತ್ತಿರುವುದನ್ನು ಗಮನಿಸಿದ ದ್ವಿಚಕ್ರ ವಾಹನ ಸವಾರ ಕ್ಷಣಮಾತ್ರದಲ್ಲಿ ವಾಹನವನ್ನು ಬಲಬದಿಗೆ ತಿರುಗಿಸಿ ಅಪಾಯದಿಂದ ಪಾರಾಗಿದ್ದಾರೆ. ಅವರ ಸಮಯಪ್ರಜ್ಞೆಯಿಂದ ಮತ್ತೊಂದು ಸಂಭವನೀಯ ಅಪಘಾತ ತಪ್ಪಿದೆ.

Post a Comment

0 Comments

Advertisement