ನೆಲ್ಲಿಕಾರು : ಕಟ್ಟಿದ್ದ ದನವನ್ನು ಬಿಡಿಸಿಕೊಂಡು ಬರುವಾಗ ಕಾಲಿಗೆ ಸುತ್ತಿಕೊಂಡ ಹಗ್ಗ : ಮಹಿಳೆ ಸಾವು
ಮೂಡುಬಿದಿರೆ : ಮಹಿಳೆಯೋವ೯ರು ಹುಲ್ಲು ಮೇಯಲು ಕಟ್ಟಿ ಹಾಕಿದ್ದ ದನವನ್ನು ಬಿಡಿಸಿಕೊಂಡು ಬರುತ್ತಿದ್ದ ಸಂದಭ೯ ಹಗ್ಗ ಕಾಲಿಗೆ ಸುತ್ತಿಕೊಂಡು ಸಾವನ್ನಪ್ಪಿದ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡುಕಲ್ಲು ಬಳಿ ಭಾನುವಾರ ನಡೆದಿದೆ.
ನಿಟ್ಟೆ ಹಾಳೆಕಟ್ಟೆ ನಿವಾಸಿ ರಘುರಾಮ ಅವರ ಪತ್ನಿ ಸೌಮ್ಯ (30) ಮೃತಪಟ್ಟ ಮಹಿಳೆ.
ಸೌಮ್ಯ ಅವರು ನಾಲ್ಕು ದಿನಗಳ ಹಿಂದೆ ನೆಲ್ಲಿಕಾರಿನಲ್ಲಿರುವ ತನ್ನ ತವರು ಮನೆಗೆ ಬಂದಿದ್ದರು. ತಮ್ಮ ಮನೆಯ ಸಮೀಪ ಹುಲ್ಲು ಮೇಯಲು ದನವನ್ನು ಕಟ್ಟಿ ಹಾಕಲಾಗಿತ್ತು. ಮಧ್ಯಾಹ್ನದ ವೇಳೆಗೆ ದನದ ಹಗ್ಗ ಬಿಚ್ಚಿ ಕರೆದುಕೊಂಡು ಸಂದಭ೯ ದನವು ಓಡಿ ಹೋದಾಗ ಅದನ್ನು ಎಳೆದು ನಿಲ್ಲಿಸಲು ಪ್ರಯತ್ನಿಸಿದಾಗ ಹಗ್ಗ ಅವರ ಕಾಲಿಗೆ ಸುತ್ತಿಕೊಂಡು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಕಾಕ೯ಳದ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸೌಮ್ಯ ಅವರಿಗೆ ಎಂಟು ತಿಂಗಳ ಮಗುವಿದೆ.

0 Comments