ಮೂಡುಬಿದಿರೆ : ದಾರಿದೀಪ ಜ್ಞಾನ ವಿಕಾಸ ಕೇಂದ್ರದ ವಾಷಿ೯ಕೋತ್ಸವ

ಮೂಡುಬಿದಿರೆ : ದಾರಿದೀಪ ಜ್ಞಾನ ವಿಕಾಸ ಕೇಂದ್ರದ ವಾಷಿ೯ಕೋತ್ಸವ 
ಮೂಡುಬಿದಿರೆ : ತಾಲೂಕಿನ ಪ್ರಾಂತ್ಯ ಕಾರ್ಯಕ್ಷೇತ್ರದ ದಾರಿದೀಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್ ಐ ಪ್ರತಿಭಾ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಮಾದಕ ವಸ್ತುಗಳ ಬಳಕೆಯಿಂದ ಆಗುವ ತೊಡಕುಗಳು, ಡ್ರಗ್ಸ್ ಬಳಕೆ ಮಾಡುತ್ತಿರುವ ಮಕ್ಕಳನ್ನು ಪತ್ತೆ ಹಚ್ಚುವ ವಿಧಾನ ಕುರಿತು ಮಾಹಿತಿ ನೀಡಿದರು.      

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. 

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ತಾಲೂಕಿನ ಯೋಜನಾಧಿಕಾರಿ ಬಿ. ಧನಂಜಯ ಅವರು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ ಅದರಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಗಳ ಕುರಿತು ಮಾಹಿತಿ ನೀಡಿದರು.

 ಮಾಸ್ತಿಕಟ್ಟೆ ಶಾಲೆಯ ಮುಖ್ಯ ಶಿಕ್ಷಕಿ ಸೇಸಮ್ಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಜ್ಞಾನವಿಕಾಸ ದಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವ ಅನಿವಾರ್ಯತೆ ಕುರಿತು , ಮಹಿಳೆಯರಿಗೆ ಜ್ಞಾನವಿಕಾಸದಂತಹ ಕಾರ್ಯಕ್ರಮಗಳು ಎಷ್ಟು ಅವಶ್ಯಕ ಎಂಬುದನ್ನು ತಿಳಿಸಿದರು. 
 
ಸದಸ್ಯರಿಗೆ ಸಂಗೀತಕುರ್ಚಿ, ಜ್ಞಾಪಕ ಶಕ್ತಿ ಆಟ, ಬಾಲ್ ಪಾಸಿಂಗ್ ಸ್ಪರ್ಧೆ, ಹೂಗುಚ್ಛ ಸ್ಪರ್ಧೆ ಇನ್ನಿತರ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮ ದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನೂತ, ಸೇವಾಪ್ರತಿನಿಧಿಗಳು, ಕೇಂದ್ರದ ಸದಸ್ಯರು ಭಾಗವಹಿಸಿದ್ದರು.

Post a Comment

0 Comments

Advertisement