ಮೂಡುಬಿದಿರೆ : ಜೈನ್ ಮಿಲನ್ ಲಂಡನ್ ಇದರ ವಾರ್ಷಿಕ ಸಭೆಯು ಶಾಂತಿನಾಥ ದಿಗಂಬರ ಜೈನ ಬಸದಿ , Slough, ಇಂಗ್ಲೆಂಡ್ ನಲ್ಲಿ ನಡೆಯಿತು.

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ : ಜೈನ್ ಮಿಲನ್ ಲಂಡನ್ ಇದರ ವಾರ್ಷಿಕ ಸಭೆಯು ಶಾಂತಿನಾಥ ದಿಗಂಬರ ಜೈನ ಬಸದಿ , Slough, ಇಂಗ್ಲೆಂಡ್ ನಲ್ಲಿ ನಡೆಯಿತು.
ಮೊದಲಿಗೆ ಬಸದಿಯಲ್ಲಿ ಪೂಜಾ ಕಾರ್ಯಕ್ರಮ ಗಳು ನಡೆದವು .
ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಜೈನ್ ಮಿಲನ್ ಲಂಡನ್ ಅಧ್ಯಕ್ಷ ಡಾ. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನು ಸ್ವಾಗತಿಸಿ, ಜೈನ ಧರ್ಮದ ತತ್ವ ಸಿದ್ಧಾಂತಗಳ ಪಾಲನೆ ಮತ್ತು ಆಚರಣೆಯಿಂದ ಜೀವನದಲ್ಲಿ ಆರೋಗ್ಯಕರವಾಗಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಆರವ್ ಜೈನ್ ಅವರು ಗಿಟಾರ್ ಮೂಲಕ ಪಂಚ ನಮಸ್ಕಾರ ಮಂತ್ರವನ್ನು ನುಡಿಸಿ ಮತ್ತು ಆಖ್ಯ ಹೆಗ್ಡೆ ಅವರು ಗಿಟಾರ್ ನುಡಿಸುತ್ತಾ ಪಾರ್ಶ್ವನಾಥ ಸ್ತುತಿ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು . 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಚಾರ್ಯ ಶ್ರೀ ವಿದ್ಯಾಸಾಗರ 
ದಿಗಂಬರ ಜೈನ ಚಾರಿಟೇಬಲ್ ಟ್ರಸ್ಟ್ ಲಂಡನ್ ಇದರ ಟ್ರಸ್ಟಿ ಸಂತೋಷ್ ಕುಮಾರ್ ಜೈನ್ ಅವರು ಟ್ರಸ್ಟ್ ಬೆಳೆದು ಬಂದ ದಾರಿ , ಬಸದಿಯ ನಿರ್ಮಾಣ, ಉದ್ದೇಶ ಹಾಗೂ ಆಶಯಗಳ ಬಗ್ಗೆ ಮಾಹಿತಿ ನೀಡಿದರು.

ಮಿಲನ್ ಉಪಾಧ್ಯಕ್ಷ ನಿಖಿಲ್ ಬಿ. ಎ ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿ , ಮುಂದಿನ ಜೈನ್ ಮಿಲನ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು .

ಕೈವಲ್ಯ ಜೈನ್, ಕೇವಲ್ ಜೈನ್, ಧೀಮನ್ ಬಲ್ಲಾಳ್ ಜಿನ ಭಜನೆ ಹಾಡಿದರು.

ಅಕ್ಷಯ , ಸಂಪದ , ದೀಕ್ಷಾ ಮತ್ತು ಸಂಧ್ಯಾ ಅವರ ತಂಡ ಜಿನ ಭಜನೆ ಹಾಡಿದರು.

ಸಾರ್ಥಕ್ ಜೈನ್ ಬಾಹುಬಲಿ ಸ್ವಾಮಿಯ ಕಥೆ ಹೇಳಿದರು.

ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ಹಿಂಸೆ ಅಥವಾ ಅಹಿಂಸೆ ಎಂದು ಪರಿಗಣಿಸುವ ಕರ್ಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು .

ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಮತ್ತು ಸಾಧಕರಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಲಾಯಿತು .
ಕೋಶಾಧಿಕಾರಿ ಡಾ.ವೈಶಾಕ್ ವಿದ್ಯಾಧರ್ ವಂದಿಸಿದರು.

ಕೊನೆಯಲ್ಲಿ ಸಾಮೂಹಿಕ ಶಾಂತಿ ಮಂತ್ರ ಪಠಿಸಲಾಯಿತು.

ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿ , ಸಭಾ ಕಾರ್ಯಕ್ರಮ ದ ನಂತರ ಸದಸ್ಯರಿಗೆ ಮೋಜಿನ ಸ್ಪರ್ಧೆಗಳನ್ನು ನಡೆಸಿಕೊಟ್ಟರು .


ಕಾರ್ಯಕ್ರಮದ ಆತಿಥೇಯರಾಗಿ ಸಾಯಿನಾಥ್ ಹೆಗ್ಡೆ, ಉಜ್ವಲ್ ಶ್ರೇಯಸ್, ಡಾ. ವೈಶಾಕ್ ವಿದ್ಯಾಧರ್ , ದಯಾನಂದ ಪಾಟೀಲ್ ಕುಟುಂಬದವರು ಸಹಕರಿಸಿದರು.

ವರದಿ 
ಧೀರೇಂದ್ರ ಬಲ್ಲಾಳ್

Post a Comment

0 Comments