ಗುಣಪಾಲ ಕಡಂಬರಿಗೆ ಅವಮಾನ : ಮಿಯಾರು ಕಂಬಳದಲ್ಲಿ ಕಡಂಬರ ಕಾಲು ಹಿಡಿದು ಕ್ಷಮಾಪಣೆ ಕೇಳಿದ ಮುಚ್ಚೂರು ಲೋಕೇಶ್ ಶೆಟ್ಟಿ
ಮೂಡುಬಿದಿರೆ: ಕಂಬಳದ ಭೀಷ್ಮ ಗುಣಪಾಲ ಕಡಂಬರಿಗೆ ವಿವಿಧ ಕಡೆಗಳಲ್ಲಿ ಅವಮಾನ ಮಾಡಿರುವ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾಯ೯ದಶಿ೯ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಿಯಾರು ಕಂಬಳದಲ್ಲಿ ಸಾವ೯ಜನಿಕವಾಗಿ ಕಡಂಬರ ಕಾಲು ಹಿಡಿದು ಕ್ಷಮಾಪಣೆ ಕೇಳುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿದೆ.
ಸಂಸದ
ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ಮಂಗಳೂರು ಕಂಬಳಲ್ಲಿ ಕಡಂಬರಿಗೆ ಏಕವಚನ ಬಳಸಿ ಮಾತನಾಡುವ ಮೂಲಕ ಅವಮಾನ ಮಾಡಿದ್ದರು ಈ ಬಗ್ಗೆ ಶುಕ್ರವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಹಷ೯ವಧ೯ನ್ ನೇತೃತ್ವದಲ್ಲಿ ನಡೆದ ಕಡಂಬರ ಮತ್ತು ಕಂಬಳಾಭಿಮಾನಿಗಳ ಸಭೆಯಲ್ಲಿ ಮುಚ್ಚೂರು ಲೋಕೇಶ್ ಶೆಟ್ಟಿಯನ್ನು ಸಮಿತಿಗಳಿಂದ ವಜಾಗೊಳಿಸಬೇಕು ಮತ್ತು ಸಾವ೯ಜನಿಕವಾಗಿ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದ್ದರು ಈ ಹಿನ್ನಲೆಯಲ್ಲಿ ಲೋಕೇಶ್ ಮತ್ತು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಸಾವ೯ಜನಿಕವಾಗಿ ಕ್ಷಮಾಪಣೆ ಕೇಳಿದ್ದಾರೆ.
ಇದಕ್ಕೂ ಮೊದಲು ಮೂಡುಬಿದಿರೆಯಲ್ಲಿ ಖಾಸಗೀ ವ್ಯಕ್ತಿಯೊಬ್ಬರ ಮನೆಯಲ್ಲಿ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾತಿಗೆ ಸಭೆ ನಡೆದಿತ್ತು.
ಈ ಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳದ ಭೀಷ್ಮ ಗುಣಪಾಲ್ ಕಡಂಬ, ಅರುಣ್ ಶೆಟ್ಟಿ, ಹರ್ಷವರ್ಧನ್ ಪಾಡಿವಾಳ್, ರಶ್ಮಿತ್ ಶೆಟ್ಟಿ, ಶಕ್ತಿಪ್ರಸಾದ್ ಶೆಟ್ಟಿ, ಮಾಣಿ ಉಮೇಶ್ ಶೆಟ್ಟಿ, ಶಾಂತಿಪ್ರಸಾದ್ ಹೆಗ್ಡೆ, ಜೊಯ್ಲಸ್ ಡಿ'ಸೋಜ ಮುಂತಾದವರು ಈ ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದರು.



0 Comments