ಉದ್ಯಮದ ಕನಸು ಕಂಡಿದ್ದ ಯುವಕ ನೇಣಿಗೆ ಶರಣು

ಜಾಹೀರಾತು/Advertisment
ಜಾಹೀರಾತು/Advertisment
ಉದ್ಯಮದ ಕನಸು ಕಂಡಿದ್ದ ಯುವಕ ನೇಣಿಗೆ ಶರಣು
ಮೂಡುಬಿದಿರೆ: ಇಲ್ಲಿನ ರಿಂಗ್ ರೋಡ್ ಬಳಿಯಲ್ಲಿ ಹೊಟೇಲ್ ಉದ್ಯಮವನ್ನು ಆರಂಭಿಸಬೇಕೆಂದು ಕನಸು ಕಂಡಿದ್ದ ಯುವಕನೋವ೯ ನೇಣಿಗೆ ಶರಣಾದ ಘಟನೆ ಶನಿವಾರ ಮಧ್ಯಾಹ್ನ ನಾಗರಕಟ್ಟೆಯಲ್ಲಿ ನಡೆದಿದೆ. 

ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆಯ ಬಳಿ ಕಬ್ಬಿನ ಜ್ಯೂಸ್ ನ ಮಾರಾಟ ಮಾಡುತ್ತಿರುವ ಶ್ರೀನಿವಾಸ್ ಅವರ ಮಗ ದೀಕ್ಷಿತ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದ ದೀಕ್ಷಿತ್ ಕಳೆದ ಒಂದೂವರೆ ವಷ೯ಗಳಿಂದ ಊರಿನಲ್ಲಿಯೇ ಇದ್ದು ಹೊಟೇಲ್ ನಡೆಸುವ ಯೋಚನೆಯನ್ನು ಮಾಡಿದ್ದು ಅದಕ್ಕೆ ಪೂರಕವಾದ ಕೆಲಸಗಳನ್ನು ಮಾಡಿದ್ದರು. 
  ತಾಯಿ ಅನಾರೋಗ್ಯ ಪೀಡಿತರಾಗಿದ್ದು, ಅವರ ಮಲಗಿದ್ದ ವೇಳೆ ಮನೆಯ ಕೋಣೆಯ ಕಿಟಕಿಗೆ ಶಾಲನ್ನು ಬಳಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ.
 ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments