ಆಟೋ ಚಾಲಕ ಆತ್ಮಹತ್ಯೆ
ಮೂಡುಬಿದಿರೆ: ಆಟೋ ಚಾಲಕರೋವ೯ರು ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಮಾರ್ನಾಡು ಗ್ರಾಮದಲ್ಲಿ ಬುಧವಾರ ನಡೆದಿದೆ.
ಪಡುಮರ್ನಾಡಿನ ಅಚ್ಚರಕಟ್ಟೆ ನಿವಾಸಿ ಆನಂದ(52) ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ. ಪತ್ನಿ ಬೆಳುವಾಯಿ ಬ್ಯಾಂಕಿಗೆ ಹೋಗಿದ್ದು ಬೇರಾರು ಮನೆಯಲ್ಲಿರಲಿಲ್ಲ. ಮಧ್ಯಾಹ್ನ ವೇಳೆ ಮನೆಗೆ ಹಿಂದುರುಗಿದ ವೇಳೆ ಪತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದುಬಂದಿದೆ.
ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



0 Comments