ಪವರ್ ಫ್ರೆಂಡ್ಸ್ ಬೆದ್ರದಿಂದ ಬೈಲೂರಿನ "ಹೊಸ ಬೆಳಕು" ಆಶ್ರಮಕ್ಕೆ ಮಾನವೀಯ ಹೊರೆ ಕಾಣಿಕೆ
ವಿವಿಧ ಸಮಾಜಮುಖಿ ಕಾಯ೯ಗಳನ್ನು ಮಾಡುವ ಮೂಲಕ ಗಮನ ಸೆಳೆದಿರುವ ಮೂಡುಬಿದಿರೆಯ ಪವರ್ ಫ್ರೆಂಡ್ಸ್ ಸಂಘಟನೆಯು ಹೊಸ ವರ್ಷಕ್ಕೆ ಹೊಸಬೆಳಕು- 2026 ಎಂಬ ಹೊಸ ಯೋಜನೆಯೊಂದನ್ನು ಹಾಕಿಕೊಂಡು ಮತ್ತೊಮ್ಮೆ ಗಮನ ಸೆಳೆದಿದೆ.
ಪವರ್ ಫ್ರೆಂಡ್ಸ್ ಬೆದ್ರವು ಮಾನವೀಯ ಹೊರೆಕಾಣಿಕೆ ಎಂಬ ಧ್ಯೇಯದಡಿಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ಎರಡು ಲಕ್ಷದ ಮೊತ್ತದ ದಿನ ಉಪಯೋಗಿ ಸಾಮಗ್ರಿ ಮತ್ತು ಇತರ ದೈನಂದಿನ ಉಪಯೋಗಕ್ಕೆ ಬೇಕಾಗುವಂತ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಸಮಾಜಮುಖಿ ಕೆಲಸವನ್ನು ಮಾಡುತ್ತಿರುವ ಸಂಸ್ಥೆಗೆ ಮೂಡುಬಿದಿರೆಯ ಜನತೆಯೂ ಕೈ ಜೋಡಿಸಿದ್ದು ಒಟ್ಟಾಗಿರುವ ದಿನ ಉಪಯೋಗಿ ಸಾಮಗ್ರಿಗಳನ್ನು ಮಂಗಳವಾರ ಆಶ್ರಮಕ್ಕೆ ತೆರಳಿ ಹಸ್ತಾಂತರಿಸಿದ್ದಾರೆ.
ಈ ಸಂದಭ೯ದಲ್ಲಿ ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.



0 Comments