ಕಾರು ಢಿಕ್ಕಿ : ಬಾಲಕ ಸಾವು
ಮೂಡುಬಿದಿರೆ : ಚಾಲಕನ ಅಜಾಗರೂಕತೆಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಬಾಲಕ ಮೃತಪಟ್ಟಿರುವ ಘಟನೆ ಮಾರೂರು ಹೊಸಂಗಡಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಹೊಸಂಗಡಿಯ ನಝೀರ್ ಎಂಬವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕ.
ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದು ಇಂದು ಮಧ್ಯಾಹ್ನ ತಾಯಿಯೊಂದಿಗೆ ಅಂಗಡಿಗೆಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ
ಸಂದರ್ಭದಲ್ಲಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



0 Comments