ಜ. 11: ಮೂಡುಬಿದಿರೆಯಲ್ಲಿ ಅಪರೂಪದ ತ್ರಿವಳಿ ವಯೋಲಿನ್ ಸಂಗೀತ ಸಂಜೆ ಮೂಡುಬಿದಿರೆ.

ಜಾಹೀರಾತು/Advertisment
ಜಾಹೀರಾತು/Advertisment

 ಜ. 11: ಮೂಡುಬಿದಿರೆಯಲ್ಲಿ ಅಪರೂಪದ ತ್ರಿವಳಿ ವಯೋಲಿನ್ ಸಂಗೀತ ಸಂಜೆ ಮೂಡುಬಿದಿರೆ.

ಇಲ್ಲಿನ ಸ್ಕೖ ಪೈಂಟ್ಸ್ ಸಂಸ್ಥೆಯ ವತಿಯಿಂದ ಜನವರಿ 11 ಸಾಯಂಕಾಲ 4.45ಕ್ಕೆ ಮೂಡುಬಿದಿರೆಯ ಸೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಂತರಾಷ್ಟ್ರೀಯ ಕಲಾವಿದರಿಂದ ನಡೆಯಲಿರುವ "ತ್ರಿವಳಿ ವಯೋಲಿನ್ ವಾದನ ಕಛೇರಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದು ಸಂಘಟಕ ಶೈಲೇಂದ್ರ ಕುಮಾರ್ ಆರೋಹ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 


  ಆಕಾಶವಾಣಿಯ 'ಉನ್ನತ' ಶ್ರೇಣಿಯ ಕಲಾವಿದರು ಹಾಗೂ ಕೇರಳ ಸಂಗೀತ ನಾಟಕ ಅಕಾಡೆಮಿಯ 'ಕಲಾಶ್ರೀ' ಪುರಸ್ಕೃತರಾದ ತಿರುವನಂತಪುರಂನ ಸಹೋದರ-ಸಹೋದರಿ ಜೋಡಿ ಮಹಾದೇವಶರ್ಮ ಮತ್ತು ರಾಜಶ್ರೀ ಅವರೊಂದಿಗೆ ಯುವ ಪ್ರತಿಭೆ ಮಾಸ್ಟರ್‌ವೈದ್ಯನಾಥಶರ್ಮ ಅವರು ವಾಯಲಿನ್ ಕಛೇರಿ ನಡೆಸಿಕೊಡಲಿದ್ದಾರೆ. ಡಾ.ಎ ಜಯಕೃಷ್ಣನ್, ತ್ರಿಚೂರು ಮೃದಂಗ ಹಾಗೂ ವೆಲ್ಲಂತಂಜೂರು ಶ್ರೀಜಿತ್ ಘಟಂನಲ್ಲಿ ಸಹಕರಿಸಲಿದ್ದಾರೆ. 

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಆಶೀರ್ವಚನ ನೀಡಲಿರುವರು. ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿರುವರು. ಸಂಗೀತಾಭಿಮಾನಿಗಳಿಗೆ ಉಚಿತ ಪ್ರವೇಶವಿದೆ ಎಂದು ಅವರು ಮಾಹಿತಿ ನೀಡಿದರು. 

ಯತಿರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Post a Comment

0 Comments