ಸರಕಾರಿ ಶಾಲೆ ಸಮುದಾಯದ ಶಾಲೆ : ಕೆ. ಪಿ. ಸುಚರಿತ ಶೆಟ್ಟಿ
ಮೂಡುಬಿದಿರೆ : ಸರಕಾರಿ ಶಾಲೆ ಸಮುದಾಯದ ಶಾಲೆ. ಇಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಉತ್ತಮ ಶಿಕ್ಷಕರಾಗಿದ್ದು ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳನ್ನು ಸೃಜನಶೀಲವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಕೆಎಂಎಫ್ ನ ನಿದೇ೯ಶಕ ಕೆ. ಪೀ. ಸುಚರಿತ ಶೆಟ್ಟಿ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಇದರ ವಾಷಿ೯ಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆಂಗ್ಲ ಮಾಧ್ಯಮ ಶಾಲೆಗಿಂತಲೂ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಊರವರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಸಹಕಾರ ನೀಡಬೇಕು. ಮಕ್ಕಳ ಸಂಖ್ಯೆ ಹೆಚ್ಚಾದರೆ ನಮಗೆ ಸರಕಾರದಿಂದ ಅನುದಾನವನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದ ಅವರು ಪ್ಲಾಸ್ಟಿಕ್ ನ ಬಳಕೆಯನ್ನು ಕಡಿಮೆಗೊಳಿಸುವಂತೆ ಸಲಹೆ ನೀಡಿದರು.
ಗೌರವ ಸನ್ಮಾನ : ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾಯ೯ಕ್ರಮಗಳನ್ನು ಸಂಯೋಜಿಸಿರುವ ಹಳೆ ವಿದ್ಯಾರ್ಥಿಗಳಾದ ರಚನಾ, ಶರಣ್, ಮಧು, ಕ್ಷೀರಾಜ್ ಅವರನ್ನು ಸನ್ಮಾನಿಸಲಾಯಿತು.
ಕಲಿಯುವಿಕೆಯಲ್ಲಿ ಅಧಿಕ ಅಂಕಗಳನ್ನು ಪಡೆದಿರುವ ರಿತಿಕಾ, ಸಾನ್ವಿ ಹಾಗೂ ರುತ್ವಿ ಅವರನ್ನು ಗೌರವಿಸಲಾಯಿತು.
ಆಳ್ವಾಸ್ ನ ವೃತ್ತಿ ತರಬೇತಿಯ ವಿದ್ಯಾಥಿ೯ ಈರಣ್ಣ ಅವರನ್ನು ಸನ್ಮಾನಿಸಲಾಯಿತು.
ಪುರೋಹಿತರಾದ ಆನಂತ ಪದ್ಮನಾಭ ಪೆಜತ್ತಾಯ, ಉದ್ಯಮಿಗಳಾದ ಅಶೋಕ ಶೆಟ್ಟಿ, ಪೃಥ್ವಿ ರಾಜ್ ಜೈನ್, ಸೆಲ್ವ ಕುಮಾರ್,
ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘದ
ಶ್ಯಾಮ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ
ಗುರುಪ್ರಸಾದ್,
ಕಾಕ೯ಳ ಎಲ್ ಐ ಸಿಯ ಆಡಳಿತಾಧಿಕಾರಿ ರಾಮ,
ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ಮೂಡುಬಿದಿರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಸುಧಾಕರ ಸಾಲ್ಯಾನ್, ಐಎಫ್ ಸಿ ಸಂಯೋಜಕಿ ಶಾಲಾ ಹಳೆ ವಿದ್ಯಾಥಿ೯ ಅನ್ವಯ, ಹೋಲಿ ರೋಸರಿ ಕಾಲೇಜಿನ ಉಪನ್ಯಾಸಕಿ ಸಮ್ಯತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಆಚಾಯ೯, ಐ. ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಸೇಸಮ್ಮ ಸ್ವಾಗತಿಸಿ ವರದಿ ವಾಚಿಸಿದರು. ಶಿಕ್ಷಕಿಯರಾದ ಹಷಿ೯ತಾ ಮತ್ತು ನಾಗರತ್ನ ಬಹುಮಾನಿತರ ಪಟ್ಟಿ ವಾಚಿಸಿದರು. ಶ್ರೀನಿವಾಸ ಕಾಯ೯ಕ್ರಮ ನಿರೂಪಿಸಿದರು. ಪೋಷಕರಾದ ಮಹೇಶ್ ಕಕೇ೯ರಾ ವಂದಿಸಿದರು.
ನಂತರ ವಿದ್ಯಾಥಿ೯ಗಳು ಮತ್ತು ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆದವು.










0 Comments