ಶಿತಾ೯ಡಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾಯ೯ಕ್ರಮ
ಮೂಡುಬಿದಿರೆ : ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಬಾರ್ಡ್, ಕೆನರಾ ಬ್ಯಾಂಕ್, ಕೆನರಾ ಫೈನಾನ್ಷಿಯಲ್ ಅಡ್ವೈಸರಿ ಟ್ರಸ್ಟ್ ಹಾಗೂ ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ನಡೆಯಿತು.
ನಬಾರ್ಡ್‌ನ ಡಿಡಿಎಂ ಹಾಗೂ ಎಜಿಎಂ ಸಂಗೀತಾ ಎಸ್. ಕಾರ್ತಾ ಅವರು ಉದ್ಘಾಟಿಸಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ವ್ಯಕ್ತಿಯ ಜೀವನಮಟ್ಟ ಸುಧಾರಣೆಗೆ ಎಷ್ಟು ಅಗತ್ಯ ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಶಿರ್ತಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್., ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ರವಿನಾ ಬಂಗೇರ, ಸಂಜೀವಿನಿ ಜಿ.ಪಿ ಮಟ್ಟದ ಫೆಡರೇಷನ್ ಅಧ್ಯಕ್ಷೆ ಸವಿತಾ ಭಂಡಾರಿ, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ಶುಭಾ, ಎನ್‌ಆರ್‌ಎಲ್‌ಎಂ ಕ್ಲಸ್ಟರ್ ಮೇಲ್ವಿಚಾರಕಿ ಶ್ರೀಮತಿ ಪ್ರಜ್ವತ ಅವರು ಉಪಸ್ಥಿತರಿದ್ದು ಶುಭಹಾರೈಸಿದರು.
ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಹಣಕಾಸು ಸಾಕ್ಷರತಾ ಸಲಹೆಗಾರ ಲತೇಶ್ ಬಿ. ಅವರು ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ವ್ಯವಹಾರಗಳು, ಉಳಿತಾಯ, ಸಾಲ ಶಿಸ್ತಿನ ಮಹತ್ವ ಹಾಗೂ ಹಣಕಾಸು ಭದ್ರತೆ ಕುರಿತು ಜಾಗೃತಿ ಮೂಡಿಸಿದರು.
ಗೀತಾ ಪ್ರಾರ್ಥನೆಗೈದರು. , ಶ್ರೀಮತಿ ರೇಖಾ ಸ್ವಾಗತಿಸಿದರು.
ಪ್ರತಿಭಾ ನಿರೂಪಣೆಗೈದರು. ಶ್ರೀಮತಿ ಮಮತಾ ಧನ್ಯವಾದವಿತ್ತರು.



0 Comments