ತಾಲೂಕಿನ ಈವ೯ರು ಪಿಡಿಒಗಳಿಗೆ ಬೀಳ್ಕೊಡುಗೆ
ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು, ದರೆಗುಡ್ಡೆ ಹಾಗೂ ನೆಲ್ಲಿಕಾರು ಗ್ರಾಮ ಪಂಚಾಯತ್ ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿ ಪಂಚಾಯತ್ ಗೆ ವರ್ಗಾವಣೆಗೊಂಡಿರುವ ಪ್ರಶಾಂತ್ ಶೆಟ್ಟಿ ಹಾಗೂ ಪಾಲಡ್ಕ, ತೆಂಕಮಿಜಾರು ಹಾಗೂ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮುಚ್ಚೂರು ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿರುವ ಕು.ರಕ್ಷಿತಾ ಡಿ.ಅವರನ್ನು ಬೀಳ್ಕೊಡುವ ಸಮಾರಂಭವು ಮೂಡುಬಿದಿರೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ ಬಿ.ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರು ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ.ಸಹಾಯಕ ನಿರ್ದೇಶಕರಾದ ಸಾಯೀಶ್ ಚೌಟ,ಸಹಾಯಕ ಲೆಕ್ಕಾಧಿಕಾರಿ ಆಶಾಲತಾ,ಅನ್ವಯ,ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



0 Comments