ನ್ಯೂ ವೈಬ್ರೆಂಟ್ ಪ. ಪೂ. ಕಾಲೇಜಿನ ವಾಷಿ೯ಕ ಕ್ರೀಡಾಕೂಟ

ಜಾಹೀರಾತು/Advertisment
ಜಾಹೀರಾತು/Advertisment

 ನ್ಯೂ ವೈಬ್ರೆಂಟ್ ಪ. ಪೂ. ಕಾಲೇಜಿನ ವಾಷಿ೯ಕ ಕ್ರೀಡಾಕೂಟ

ಮೂಡಬಿದಿರೆ: ನ್ಯೂ ವೈಬ್ರೆoಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಜಿ.ವಿ ಪೈ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು. 

ಪುರಸಭೆಯ ಸದಸ್ಯ ಜೊಸ್ಸಿ ಮಿನೇಜಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಸ್ವಾಸ್ತ್ಯ ಕಾಪಾಡುವಲ್ಲಿ ಕ್ರೀಡೆಯು ಅನಿವಾರ್ಯ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಮಾನವನ ಪ್ರಗತಿ ಸಾಧ್ಯವೆಂದು ತಿಳಿಸಿದರು. ಸದಸ್ಯ ಸುರೇಶ್ ಕೋಟ್ಯಾನ್ ಮಾತನಾಡಿ "ರಾಜ್ಯಮಟ್ಟದಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡಿದ್ದಾರೆ. ಇಂದಿನ ದಿನವೂ ಕೂಡ ಎಲ್ಲಾ ವಿದ್ಯಾರ್ಥಿಗಳು ಕೂಡ ಕ್ರೀಡಾ ಕೂಟದಲ್ಲಿ ಭಾಗವಹಿಸಿ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗಿದ್ದು ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ ಬಳಸಿಕೊಳ್ಳಿ ಎಂದರು. 


  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಹಾಗೂ ಟ್ರಸ್ಟಿ ಡಾ ಎಸ್‌.ಎನ್. ವೆಂಕಟೇಶ್ ನಾಯಕ್ ಮಾತನಾಡಿ, " ಆಟದಲ್ಲಿ ಶಿಸ್ತು, ಸಂಯಮ ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಸಾಧ್ಯವಿಲ್ಲ. ಭಾಗವಹಿಸಿದವರು ಶಿಸ್ತಿನ ಮೂಲಕ ಎಲ್ಲರಿಗೂ ಮಾದರಿಯಾಗಬೇಕು . ತೀರ್ಪುಗಾರರ ತೀರ್ಪಿಗೆ ಗೌರವವನ್ನು ನೀಡಬೇಕು. ಗೆಲುವನ್ನು ವಿನಯದಿಂದ ಸ್ವೀಕರಿಸಿ ಹಾಗೂ ಸೋತರೆ ಅದು ಜ್ಞಾನ ಬಣ್ಣ ವೃದ್ಧಿಸಬೇಕು. ಕ್ರೀಡಾ ಸ್ಪರ್ಧಿಗಳು ಕ್ರೀಡೆಯಲ್ಲೂ ತಮ ಜೀವನದಲ್ಲಿ ಕೂಡ ಶಿಸ್ತನ್ನು ರೂಡಿಸಿಕೊಳ್ಳಿ . ದೇಹಕ್ಕೆ ಕ್ರೀಡೆ ಬಹು ಮುಖ್ಯ " ಎಂದರು. ಕಾಲೇಜಿನ ಟ್ರಸ್ಟಿಗಳಾದ          

  ಚಂದ್ರಶೇಖರ್ ರಾಜೇ ಅರಸ್, ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್, ಸುಭಾಷ್ ಝಾ, ಡಾ. ಶರತ್ ಗೋರೆ , ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು.


 ಕನ್ನಡ ವಿಭಾಗದ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments