ಸಮಗ್ರ ಕೃಷಿಯಿಂದ ಸಂತುಷ್ಠ ಜೀವನ ನಡೆಸುತ್ತಿರುವ ಕೆಲ್ಲಪುತ್ತಿಗೆಯ ಮಾದರಿ ರೈತ
ಒಂದೇ ಬೆಳೆಯನ್ನು ನಂಬಿದರೆ ತಾನು ಕೈ ಸುಟ್ಟುಕೊಳ್ಳಬಹುದು ಎಂದು ಅಂದಾಜಿಸಿರುವ ರೈತರೋವ೯ರು ತನ್ನ ಮೂರು ಎಕ್ರೆ ಭೂಮಿಯಲ್ಲಿ ಸಮಗ್ರ ಕೃಷಿಯನ್ನು ಮಾಡುವ ಮೂಲಕ ಸಂತುಷ್ಠ ಜೀವನವನ್ನು ನಡೆಯುತ್ತಿದ್ದಾರೆ.
ಮೂಡುಬಿದಿರೆ ತಾಲೂಕಿನ ಕೆಲ್ಲಪುತ್ತಿಗೆಯ ಕನರೊಟ್ಟುವಿನ ಗೋಪಾಲ ಪೂಜಾರಿ ಅವರೇ ಕಳೆದ ಕೆಲವು ವಷ೯ಗಳಿಂದ ಸಮಗ್ರ ಬೆಳೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕೃಷಿಕ.
ಬತ್ತ, ತೆಂಗು, ಅಡಿಕೆ, ಹೈನುಗಾರಿಕೆ, ಮೀನು ಕೃಷಿ, ಅಣಬೆ ಕೃಷಿ, ಜೇನು ಕೃಷಿ, ಅಕ್ಕಿ ರೊಟ್ಟಿ, ವಿವಿಧ ರೀತಿಯ ತರಕಾರಿ, ಬಾಳೆ, ವೀಳ್ಯದೆಲೆ, ಕಾಳು ಮೆಣಸು, ರಂಬೂಟಾನ್, ಕಾಫಿ, ವಿವಿಧ ರೀತಿಯ ಮಾವು, ಗೇರು, ಮ್ಯಾಂಗೋ ಸ್ಟ್ರೀ, ಕೋಕೋ ಮುಂತಾದ ವಿವಿಧ ರೀತಿಯ ಬೆಳೆಗಳನ್ನು ಮಾಡುತ್ತಾ ನೆಮ್ಮದಿಯನ್ನು ಕಾಣುವ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಅಣಬೆ ಕೃಷಿ: ಸಣ್ಣ ಮಟ್ಟದಲ್ಲಿ ಅಣಬೆ ಕೃಷಿಯನ್ನು ಆರಂಭಿಸಿರುವ ಗೋಪಾಲ ಪೂಜಾರಿ ಅವರು ಅಕ್ಕ ಪಕ್ಕದವರಿಗೆ, ಮನೆ ಖಚಿ೯ಗೆ ಹಾಗೂ ಕೇಳಿದವರಿಗೆಲ್ಲಾ ಅಣಬೆಯನ್ನು ಮಾರಾಟ ಮಾಡುತ್ತಿದ್ದಾರೆ ಅಲ್ಲದೆ ಈ ಕೃಷಿಯನ್ನು ಇತರರು ಮಾಡಬೇಕೆನ್ನುವ ಉದ್ದೇಶದಿಂದ ಆಸಕ್ತರಿಗೆ ಅಣಬೆ ಕೃಷಿಯ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದು ಮುಂದೆ ದೊಡ್ಡ ಮಟ್ಟದಲ್ಲಿ ಈ ಕೃಷಿಯನ್ನು ಮಾಡುವ ಯೋಚನೆಯನ್ನು ಮಾಡಿದ್ದಾರೆ.
ಹೈನುಗಾರಿಕೆ, ಮೀನುಗಾರಿಕೆ : ವಿವಿಧ ರೀತಿಯ ಕೃಷಿಯ ಜತೆಗೆ ಸುಮಾರು ಆರು ದನಗಳನ್ನು ಸಾಕುವ ಮೂಲಕ ಹೈನುಗಾರಿಕೆಯಲ್ಲೂ ಉತ್ಸಾಹವನ್ನು ಹೊಂದಿದ್ದಾರೆ. ಕೃಷಿಗೆ ರಾಸಾಯನಿಕ ಗೊಬ್ಬರವನ್ನು ಬಳಸದೆ ಹಟ್ಟಿಗೊಬ್ಬರವನ್ನೇ ಉಪಯೋಗಿಸಿ ಆರೋಗ್ಯ ಪೂಣ೯ ಆಹಾರಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಜತೆಗೆ ಮೀನು ಕೃಷಿಯನ್ನು ಮಾಡುವ ಮೂಲಕ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.
ಕೃಷಿ ಹೊಂಡದಲ್ಲೇ ತರಕಾರಿ ಕೃಷಿ : ಕೃಷಿ ಹೊಂಡವನ್ನು ನಿಮಿ೯ಸಿರುವ ಅವರು ಮಳೆಗಾಲ ಮುಗಿದ ನಂತರ ಆ ಹೊಂಡದಲ್ಲೇ ಬಸಳೆ, ಮೆಣಸು ಮತ್ತು ಇತರ ತರಕಾರಿಯನ್ನು ಬೆಳೆಸುತ್ತಿದ್ದಾರೆ.
ಅಕ್ಕಿ ರೊಟ್ಟಿ : ಗೋಪಾಲ್ ಪೂಜಾರಿ ಅವರ ಪತ್ನಿ ರಜನಿ ಅವರು ಸಂಜೀವಿನಿ ಘಟಕದ ಮೂಲಕ " ಸ್ವಸ್ತಿಕ್ ಅಕ್ಕಿರೊಟ್ಟಿ" ಹೋಂ ಪ್ರಾಡೆಕ್ಟನ್ನು ನಡೆಸುವ ಮೂಲಕ ಪತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ವರದಿ : ಪ್ರೇಮಶ್ರೀ ಕಲ್ಲಬೆಟ್ಟು
-------------------------------
ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರೇರಣೆ
ಶಾಲೆ ಬಿಟ್ಟ ನಂತರ ಕಳೆದ 25 ವಷ೯ಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. 27 ವಷ೯ಗಳ ಹಿಂದೆ ತಾಲೂಕಿಗೆ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾದಾರ್ಪಣೆ ಮಾಡಿದ್ದು ಆಗ ಪ್ರಗತಿ ತಂಡಕ್ಕೆ ಸೇಪ೯ಡೆಗೊಂಡು ಆ ನಂತರ ಕೃಷಿ ತರಬೇತಿಗಳನ್ನು ಪಡೆದುಕೊಂಡು ವಿವಿಧ ರೀತಿಯ ತರಕಾರಿಗಳನ್ನು ಬೆಳೆಸಲು ಸಹಕಾರಿಯಾಯಿತು.
ಅಲ್ಲದೆ ಯೋಜನೆಯ ಸಹಕಾರದಿಂದ ತಂಡದ ಮೂಲಕ ಹೈನುಗಾರಿಕೆಯ ಕೆಲ್ಲಪುತ್ತಿಗೆಯಲ್ಲಿ ಮಿನಿ ಡೈರಿಯನ್ನು ಆರಂಭಿಸಲಾಗಿದ್ದು ಇದೀಗ ವರಬೈಲು ಪ್ರಗತಿಬಂಧು ತಂಡದಿಂದ ಸ್ವಂತ ಡೈರಿಯನ್ನು ಆರಂಭಿಸಲಾಗಿದೆ.
ನಾವು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಹೊರ ದೇಶಗಳಿಗೆ ಉದ್ಯೋಗಕ್ಕೆ ಕಳಿಸುವ ಯೋಚನೆ ಮಾಡುತ್ತೇವೆ ಇದು ತಪ್ಪು.
ಕೃಷಿ ಯಾವತ್ತೂ ನಮ್ಮ ಕೈ ಬಿಡಲ್ಲ. ಮೊದಲಿಗೆ ಸೋಲಾಗಬಹುದು ಆದರೆ ನಂತರ ಫಲ ಸಿಕ್ಕೇ ಸಿಗುತ್ತದೆ. ಎರೆಹುಳ ಗೊಬ್ಬರ ತಯಾರಿ, ಅಣಬೆ ಕೃಷಿ, ಹಾಳೆ ತಟ್ಟೆ ತಯಾರಿ, ಹೈನುಗಾರಿಕೆ ಲಾಭದಾಯಕವಾಗಿದೆ ಈ ಉದ್ದಿಮೆಗಳಲ್ಲಿ ತೊಡಗಿಸಿಕೊಂಡರೆ ಸಂತ್ರಪ್ತ ಜೀವನ ನಡೆಸಬಹುದು. ತಾನು ಮಾಡುತ್ತಿರುವ ವಿವಿಧ ರೀತಿಯ ಕೃಷಿಯಲ್ಲಿ ಪತ್ನಿ, ಮಗ ಹಾಗೂ ತಾಯಿಯನ್ನೂ ಸೇರಿಸಿಕೊಂಡಿದ್ದೇನೆ ಅವರೂ ಪ್ರೀತಿಯಿಂದ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಈ ಸಮಗ್ರ ಕೃಷಿಯಿಂದ ವಷ೯ಕ್ಕೆ 2 ಲಕ್ಷದಷ್ಟು ಲಾಭವನ್ನು ಪಡೆದುಕೊಳ್ಳುತ್ತಿದ್ದೇನೆ : ಗೋಪಾಲ ಪೂಜಾರಿ (ಕೃಷಿಕ )
------------------_-------







0 Comments