'ಪಾಲ್ದಾಟ್ಟೆಡ್ ಬಂಟೆರೆ ಪರ್ಬ' -2025 ಮೂಡುಬಿದಿರೆ ಬಂಟರ ಸಂಘಕ್ಕೆ ಪ್ರಥಮ ಬಹುಮಾನ

ಜಾಹೀರಾತು/Advertisment
ಜಾಹೀರಾತು/Advertisment

 'ಪಾಲ್ದಾಟ್ಟೆಡ್ ಬಂಟೆರೆ ಪರ್ಬ' -2025

 ಮೂಡುಬಿದಿರೆ ಬಂಟರ ಸಂಘಕ್ಕೆ ಪ್ರಥಮ ಬಹುಮಾನ

ಮೂಡುಬಿದಿರೆ : ಇಲ್ಲಿನ ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ನಡೆದ 'ಪಾಲ್ದಾಟ್ಟೆಡ್ ಬಂಟೆರೆ ಪರ್ಬ - 2025' ರಾಷ್ಟ್ರೀಯ ಮಟ್ಟದ ಬಂಟರ ಕಲಾವೈಭವ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಸಂಘ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.


ಭಾನುವಾರ ಬಜಪೆಯಲ್ಲಿ ಜರುಗಿದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವೂ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. 


ರಾಷ್ಟ್ರ ಮಟ್ಟದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಒಟ್ಟು ಒಂಬತ್ತು ಬಲಿಷ್ಠ ತಂಡಗಳು ಭಾಗವಹಿಸಿದ್ದವು. ಬಂಟರ ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಪ್ರದರ್ಶನ ನೀಡಿದ ಮೂಡುಬಿದಿರೆ ತಂಡವು ತೀರ್ಪುಗಾರರ ಮೆಚ್ಚುಗೆ ಗಳಿಸಿತು.

 ಪ್ರಥಮ ಸ್ಥಾನ ಗಳಿಸಿದ ಮೂಡುಬಿದಿರೆ ಬಂಟರ ಸಂಘಕ್ಕೆ 1,00,000 ರೂಪಾಯಿ ನಗದು ಹಾಗೂ ಆಕರ್ಷಕ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

Post a Comment

0 Comments