ಕಲಾಸೇವೆಗೆ ವರಂಗ ವಿ.ಆರ್.ಸತೀಶ್ ಆಚಾರ್ಯರವರಿಗೆ ರವರಿಗೆ ರಾಷ್ಟ್ರೀಯ ಪುರಸ್ಕಾರ
ಕಾರ್ಕಳ,ಡಿ.28: ದಾವಣಗೆರೆಯಲ್ಲಿ ಡಿ.27 ರಂದು ಎಸ್ ಎಸ್ ಪಾಟೀಲ್ ಹುಬ್ಬಳ್ಳಿ ಇವರ ಸಾರಥ್ಯದಲ್ಲಿ ನಡೆದ 2025-26ನೇ ಸಾಲಿನ ವಿಶ್ವ ದರ್ಶನ ಸಾಹಿತ್ಯ ಸಮ್ಮೇಳನದಲ್ಲಿ ನಾಟಕ ರಚನೆ, ನಟನೆ, ನಿರ್ದೇಶನ, ಕವಿ ಗೋಷ್ಠಿ ಯಕ್ಷಗಾನ, ಸಿನಿಮಾ ಕ್ಷೇತ್ರದ ಕಲಾವಿದ ಹೆಬ್ರಿ ತಾಲೂಕಿನ ವರಂಗ ವಿ ಆರ್ ಸತೀಶ್ ಆಚಾರ್ಯ ಇವರಿಗೆ ರಂಗಭೂಮಿ ಕಲಾರತ್ನ ರಾಷ್ಟ್ರೀಯ ( ನ್ಯಾಷನಲ್ ಅವಾರ್ಡ್)ಪ್ರಶಸ್ತಿ ಲಭಿಸಿದೆ.
ರಂಗಭೂಮಿ ಕಲಾವಿದರಾದ ವಿ ಆರ್ ಸತೀಶ್ ಆಚಾರ್ಯ ವರಂಗ ಹೆಬ್ರಿ ತಾಲೂಕ್ ಇವರು, ತುಳು ನಾಟಕ, ನಟನೆ,ರಚನೆ, ನಿರ್ದೇಶನ, ಸಾಹಿತ್ಯ, ಕವಿ ಗೋಷ್ಠಿ, ಯಕ್ಷಗಾನ, ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಕಲಾವಿದರಾದ ಇವರಿಗೆ ರಂಗ ಭೂಮಿ, ಕಲಾರತ್ನ ರಾಷ್ಟ್ರೀಯ (ನ್ಯಾಷನಲ್ ಅವಾರ್ಡ್)ಪ್ರಶಸ್ತಿ ಲಭಿಸಿರುತ್ತದೆ.
ಕಾರ್ಯಕ್ರಮದಲ್ಲಿ ಸಂಪಾದಕರಾದ ಎಸ್. ಕೆ. ಪಾಟೀಲ್ ವಿಶ್ವ ದರ್ಶನ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಸಾಧಕರಿಗೆ ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು. ಗುರು ಶರಣರು ಉಪಸ್ಥಿತರಿದ್ದು ಆಶೀರ್ವದಿಸಿದರು.





0 Comments