ರಾಜ್ಯಮಟ್ಟದ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪಧೆ: ಯೆನೆಪೋಯ ಮಹಿಳೆಯರ ತಂಡ ದ್ವಿತೀಯ ಚಾಂಪಿಯನ್

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯಮಟ್ಟದ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪಧೆ: ಯೆನೆಪೋಯ ಮಹಿಳೆಯರ ತಂಡ ದ್ವಿತೀಯ ಚಾಂಪಿಯನ್

ಮೂಡುಬಿದಿರೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಅಂತ‌ರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯವು ಮಹಿಳೆಯರ ವಿಭಾಗದಲ್ಲಿ 1 ಚಿನ್ನದ ಪದಕ, 1 ಬೆಳ್ಳಿಯ ಪದಕ ಹಾಗೂ 2 ಕಂಚಿನ ಪದಕವನ್ನು ಪಡೆದು ವೈ.ಐ.ಟಿಯ ಮಹಿಳೆಯರ ತಂಡ ದ್ವಿತೀಯ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ. 


 ಪುರುಷರ ವಿಭಾಗದಲ್ಲಿ 1 ಬೆಳ್ಳಿಯ ಪದಕ, ಹಾಗೂ 4 ಕಂಚಿನ ಪದಕ ಗೆದ್ದು ತೃತೀಯ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. 


ವೈ.ಐ.ಟಿ ಪ್ರಾಂಶುಪಾಲ ಡಾ || ಅಬ್ದುಲ್ ಕರೀಮ್, ಕ್ಯಾಂಪಸ್ ಆಡಳಿತಾಧಿಕಾರಿ ಬಿ. ಮಹಮ್ಮದ್ ಶಾಹಿದ್, ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರು ವಿಜೇತರನ್ನು ಅಭಿನಂದಿಸಿದರು.

ಯೆನೆಪೋಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ  ಲೋಕೇಶ್ ವಿದ್ಯಾಥಿ೯ಗಳಿಗೆ ತರಬೇತಿ ನೀಡಿದ್ದರು.

Post a Comment

0 Comments