ಮೂಡುಬಿದಿರೆ ಲಯನ್ಸ್ ಕ್ಲಬ್ ನಿಂದ ಪೇಪರ್ ಮಿಲ್ಲ್ ನಲ್ಲಿ "ಬಸ್ಸು ಪ್ರಯಾಣಿಕರ ತಂಗುದಾಣ" ಲೋಕಾಪ೯ಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಲಯನ್ಸ್ ಕ್ಲಬ್ ನಿಂದ ಪೇಪರ್ ಮಿಲ್ಲ್ ನಲ್ಲಿ "ಬಸ್ಸು ಪ್ರಯಾಣಿಕರ ತಂಗುದಾಣ" ಲೋಕಾಪ೯ಣೆ

ಮೂಡುಬಿದಿರೆ : ಪ್ರೊವಿಟ್ ಫುಡ್ಸ್  ಪ್ರೈವೇಟ್ ಲಿಮಿಟೆಡ್ ನ ಕೊಡುಗೆಯಿಂದ ಲಯನ್ಸ್ ಕ್ಲಬ್ ಮೂಡುಬಿದಿರೆಯ ನೇತೃತ್ವದಲ್ಲಿ ಪೇಪರ್ ಮಿಲ್ಲ್ ಬಳಿ ನಿಮಾ೯ಣಗೊಂಡಿರುವ ಬಸ್ಸು ಪ್ರಯಾಣಿಕರ ತಂಗುದಾಣವನ್ನು ಲಯನ್ಸ್ ಜಿಲ್ಲೆ 317D ಯ ರಾಜ್ಯಪಾಲ ಕುಡ್ಪಿ ಅರವಿಂದ ಶೆಣ್ಯೆ ಬುಧವಾರ ಸಂಜೆ ಲೋಕಾಪ೯ಣೆಗೊಳಿಸಿದರು. 

 ನಂತರ ಮಾತನಾಡಿದ ಅವರು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮೂಡುಬಿದಿರೆಯ ಲಯನ್ಸ್ ಕ್ಲಬ್ ಜನರಿಗೆ ಉಪಯೋಗವಾಗುವಂತಹ ಕಾಯ೯ಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಪ್ರೊವಿಟ್ ಫುಡ್ಸ್ ನ ವಿನ್ಸೆಂಟ್ ಅವರ ಸಹಕಾರದೊಂದಿಗೆ ನಿಮಾ೯ಣವಾಗಿರುವ ತಂಗುದಾಣವನ್ನು ಇಲ್ಲಿನವರೇ ನಿಭಾಯಿಸಬೇಕೆಂದು ಸಲಹೆ ನೀಡಿದರು.

 


ಮೂಡುಬಿದಿರೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. 

ಪ್ರೊವಿಟ್ ಫುಡ್ಸ್  ಪ್ರೈವೇಟ್ ಲಿಮಿಟೆಡ್ ನ ಮ್ಯಾನೆಜಿಂಗ್ ಡೈರೆಕ್ಟರ್ ವಿನ್ಸೆಂಟ್ ಕುಟಿನ್ಹಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತಮ್ಮ ಸಂಸ್ಥೆಯ ಮೂಲಕ ಮೂಡುಬಿದಿರೆ ತಾಲೂಕಿನ 300 ಜನರಿಗೆ ಉದ್ಯೋಗವನ್ನು ನೀಡಲಾಗಿದೆ.  ಆದ್ಯತೆಗಯ ಮೇರೆಗೆ ಸ್ಪಂದಿಸಿ ಉತ್ತಮ ಕೆಲಸಗಳಿಗೆ ಸಿಆರ್ ಎಫ್ ಪಂಡ್ ನ್ನು ಮಂಜೂರು ಮಾಡಲಾಗಿದೆ  ಕರೆಂಟ್ ಮತ್ತು ನೀರಿನ ವ್ಯವಸ್ಥೆಯನ್ನು ಪುರಸಭೆ ಮಾಡಿ ಕೊಡುವಂತೆ ತಿಳಿಸಿದ ಅವರು ಆಟೋ ಪಾಕ್೯ಗೆ ಇಂಟರ್ ಲಾಕ್ ಹಾಗೂ ತಮ್ಮ ಸಂಸ್ಥೆಯ ಬಳಿಯ ರಸ್ತೆಗೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು.

ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ ಲಯನ್ಸ್ ಕ್ಲಬ್ ಈ ಹಿಂದೆ ಆಲಂಗಾರಿನಲ್ಲಿ ಪ್ರಯಾಣಿಕರ ತಂಗುದಾನವನ್ನು ನಿಮಿ೯ಸಿದೆ. ಇದೀಗ ಪೇಪರ್ ಮಿಲ್ಲ್ ನಲ್ಲಿಯೂ ನಿಮಿ೯ಸುವ ಮೂಲಕ ಜನಪರವಾದ ಕೆಲಸವನ್ನು ಮಾಡುತ್ತಿದೆ. ಇಲ್ಲಿಗೆ ನೀರು ಮತ್ತು ಕರೆಂಟ್ ಸಂಪಕ೯ವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. 

ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ವಾಡ್೯ ಸದಸ್ಯ ಇಕ್ಬಾಲ್ ಕರೀಂ, ಪೂವ೯ ರಾಜ್ಯಪಾಲ ಕೆ. ಸಿ. ಪ್ರಭು,  ಪ್ರಾಂತ್ಯಾಧ್ಯಕ್ಷ ಜಗದೀಶ್ಚಂದ್ರ ಡಿ. ಕೆ, ವಲಯಾಧ್ಯಕ್ಷ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಪೂವ೯ ಅಧ್ಯಕ್ಷ ದಿನೇಶ್, ನಿಕಟಪೂವ೯ ಅಧ್ಯಕ್ಷ ಬೋನವೆಂಚರ್ ಮಿನೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಮಾಜಿ ಪ್ರಾಂತ್ಯಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಉದ್ಯಮಿಗಳಾದ ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ ಉಪಸ್ಥಿತರಿದ್ದರು.

ಓಸ್ವಾಲ್ಡ್ ಡಿ'ಕೋಸ್ತಾ ವಂದಿಸಿದರು.

Post a Comment

0 Comments