ಅಳಿಯೂರು ಪ. ಪೂ. ಕಾಲೇಜಿನ ನೂತನ ಕಟ್ಟಡ ವೀಕ್ಷಿಸಿದ ಶಾಸಕ ಕೋಟ್ಯಾನ್
ಮೂಡುಬಿದಿರೆ : ಸರಕಾರಿ ಪದವಿಪೂರ್ವ ಕಾಲೇಜು ಅಳಿಯೂರು ಇಲ್ಲಿಗೆ ವಿವೇಕ ಯೋಜನೆಯ 1ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ಹೊಸ ಕಟ್ಟಡ ಕಾಮಗಾರಿಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಬುಧವಾರ ವೀಕ್ಷಿಸಿದರು.
ಕಳೆದ ಎರಡು ಶೈಕ್ಷಣಿಕ ವರ್ಷದಿಂದ 100% ಫಲಿತಾಂಶ ದಾಖಲಿಸಿರುವ ಕಾಲೇಜಿನ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ ವೃಂದದೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದಭ೯ದಲ್ಲಿ ವಾಲ್ಪಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು, ಸದಸ್ಯ ಪ್ರದೀಪ್ ಕುಮಾರ್, ಪ್ರಾಂಶುಪಾಲ ಚಂದ್ರಶೇಖರ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ರವೀಂದ್ರ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮತ್ತಿತರರು ಉಪಸ್ಥಿತರಿದ್ದರು.





0 Comments