ಯುವಜನತೆ ಕೃಷಿಯನ್ನು ಪ್ರೀತಿಸಬೇಕು : ಆಸ್ಮಾ ಬಾನು
ಮೂಡುಬಿದಿರೆ : ಜೀವ-ಜೀವನದ ನಡುವೆ ಇರುವ ಸಂಬಂಧ ಕೃಷಿ. ಯುವ ಜನತೆ ಕೃಷಿಯನ್ನು ಪ್ರೀತಿಸಿದರೆ ಮಾತ್ರ ಅದು ಉಳಿಯಲು ಸಾಧ್ಯ ಎಂದು ಕಾಕ೯ಳ ಪೆವಾ೯ಜೆ ಸರಕಾರಿ ಮಾ. ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು ಹೇಳಿದರು. ಅವರು ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ಕಲ್ಪವೃಕ್ಷ ಸಭಾಭವನದಲ್ಲಿ ನಡೆಯುತ್ತಿರುವ `ಸಹಕಾರ ಸಪ್ತಾಹ ಸಂಭ್ರಮ'ದ ಎರಡನೇ ದಿನವಾಗಿರುವ ಶನಿವಾರದಂದು ಸಹಕಾರ-ಪರಿಸರ ಸಂರಕ್ಷಣೆ-ಕೃಷಿ, ಪಶು ಸಂಗೋಪನೆ- ಗ್ರಾಮೀಣ ಅಭಿವೃದ್ಧಿ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ನಾವು ಇಂದು ರಾಸಾಯನಿಕ ಪದಾಥ೯ಗಳನ್ನು ತುಂಬಿರುವ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿ ರೋಗಗಳು ಬೆಳೆಯುವಂತೆ ಮಾಡುತ್ತಿದ್ದೇವೆ ಎಂದು ಎಚ್ಚರಿಸಿದ ಅವರು ನಮ್ಮ ಅನ್ನದ ಬಟ್ಟಲಿನಲ್ಲಿ ಕಲ್ಮಶ ಪದಾಥ೯ಗಳು ಸೇರದಂತೆ ಮಾಡಲು ದೇಶಿಯ ಭತ್ತಗಳನ್ನು ಬೆಳೆಸಿ, ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಅಕ್ಕಿ ಮತ್ತು ಸಾತ್ವಿಕ ಆಹಾರಗಳನ್ನು ಸೇವಿಸುವಂತೆ ಸಲಹೆ ನೀಡಿದರು.
ದ. ಕ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದೇ೯ಶಕ ಪ್ರವೀಣ್ ಕೆ ಮಾತನಾಡಿ ವಿದ್ಯಾಥಿ೯ಗಳು ಮೆಡಿಕಲ್, ಎಂಜಿನಿಯರ್ ಪದವಿಯನ್ನು ಪಡೆಯುವಂತೆಯೇ ಕೃಷಿರಂಗದಲ್ಲಿಯೂ ಪದವಿಯನ್ನು ಪಡೆಯಲು ಪಡೆಯಲು ಆಸಕ್ತಿ ವಹಿಸಬೇಕು. ಇಲ್ಲಿ ಉದ್ಯೋಗ ಮತ್ತು ಪಿಹೆಚ್ ಡಿಯನ್ನು ಮಾಡಲು ಅವಕಾಶವಿದೆ ಹಾಗೂ ಸರಕಾರಗಳು ಇದಕ್ಕೆ ಆಥಿ೯ಕ ಬೆಂಬಲವನ್ನು ನೀಡುತ್ತಿವೆ ಎಂದು ತಿಳಿಸಿದರು.
ದ. ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ. ಪಿ ಸುಚರಿತ ಶೆಟ್ಟಿ ಮಾತನಾಡಿ ಕೃಷಿ ನಮ್ಮ ಜೀವಾಳ. ನೆಲ ಜಲ, ಮಣ್ಣು ಇವುಗಳನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭವಿಷ್ಯ ಭಾರತದ ಯುವ ಮನಸ್ಸುಗಳು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ರಾಜು ಪೂಜಾರಿ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು.
ಸಾಧಕ ರೈತರಿಗೆ ಸನ್ಮಾನ : ಕೃಷಿಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಜಿತ್ ಕುಮಾರ್ ಜೈನ್, ಚಂದು ಭಂಡಾರಿ, ಪೌಲ್ ಪಿ. ಎಸ್. ರೆಬೆಲ್ಲೋ, ಸುಂದರ ಪೂಜಾರಿ, ಜಗನ್ನಾಥ ಶೆಟ್ಟಿ, ಸುರೇಂದ್ರ ಶೆಟ್ಟಿ ಹಾಗೂ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.
63 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಕನ್ನಡ
/ ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ 63 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ನೆಲ್ಲಿಕಾರು ವ್ಯ. ಸೇ. ಸ. ಸಂಘದ ಅಧ್ಯಕ್ಷ ಜಯವಮ೯ ಜೈನ್ ಗೌರವ ಉಪಸ್ಥಿತರಿದ್ದರು.
ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕಳೆದ ವಷ೯ದ ಕಲ್ಪವೃಕ್ಷ ಪ್ರಶಸ್ತಿ ಪುರಸ್ಕೃತರಾದ ಗಣೇಶ್ ನಾಯಕ್ ಉಪಸ್ಥಿತರಿದ್ದರು.
ವಿಶೇಷ ಕಾಯ೯ನಿವ೯ಹಣಾಧಿಕಾರಿ ಚಂದ್ರಶೇಖರ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚೇತನಾ ರವೀಂದ್ರ ಹೆಗ್ಡೆ ಸನ್ಮಾನಿತರ ಮಾಹಿತಿ ನೀಡಿದರು. ಪತ್ರಕತ೯, ಉಪನ್ಯಾಸಕ ಗಣೇಶ್ ಕಾಮತ್ ಕಾಯ೯ಕ್ರಮ ನಿರೂಪಿಸಿದರು.



0 Comments