16ನೇ ವಷ೯ದ ಪಣಪಿಲ "ಜಯ-ವಿಜಯ" ಜೋಡುಕರೆ ಕಂಬಳಕ್ಕೆ ಚಾಲನೆ
ಮೂಡುಬಿದಿರೆ : 16 ನೇ ವರ್ಷದ ಹೊನಲು ಬೆಳಕಿನ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶನಿವಾರ ಬೆಳಿಗ್ಗೆ ಚಾಲನೆ ನೀಡಿದರು.
ಕಂಬಳ ಸಮಿತಿಯ ಅಧ್ಯಕ್ಷರಾದ ನಂದೊಟ್ಟು ಪಣಪಿಲ ಯುವರಾಜ್ ಜೈನ್ ಅವರ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ : ಉದ್ಯಮಿ, ಅಸ್ತ್ರ ಗ್ರೂಪ್ ನ ಲಾಂಚುಲಾಲ್ ಅವರನ್ನು ಸನ್ಮಾನಿಸಲಾಯಿತು.
ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಕಂಬಳ ಅಕಾಡೆಮಿಯ ಗುಣಪಾಲ ಕಡಂಬ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮೂಡುಬಿದಿರೆ ಕಂಬಳ ಸಮಿತಿಯ ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ, ವಿಜಯ ಕುಮಾರ್ ಕಂಗಿನಮನೆ, ಮುರಳೀಕೃಷ್ಣ ಭಟ್ ಪಿದಮಲೆ, ಹೇಮಾ ಕೆ.ಪೂಜಾರಿ, ಪ್ರವೀಣ್ ಭಟ್ ಕಾನಂಗಿ, ವಾಲ್ಪಾಡಿ ಗ್ರಾ. ಪಂ. ಸದಸ್ಯ ಪ್ರದೀಪ್ ವಾಲ್ಪಾಡಿ, ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಸುಭಾಶ್ಚಂದ್ರ ಚೌಟ,ಉಪಾಧ್ಯಕ್ಷರಾದ ಮುನಿರಾಜ್ ಹೆಗ್ಡೆ, ರಮಾನಾಥ ಸಾಲ್ಯಾನ್, ರವಿ ಪೂಜಾರಿ, ಪ್ರವೀಣ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಕೆ.ಅಶ್ವಥ್ ಪಣಪಿಲ, ಜೊತೆ ಕಾರ್ಯದರ್ಶಿಗಳಾದ ಯೋಗೀಶ್ ನಂದೊಟ್ಟು, ದೀಕ್ಷಿತ್ ಪಣಪಿಲ, ಕೋಶಾಧಿಕಾರಿ ಜಯಚಂದ್ರ ಎನ್. ಸತೀಶ್ ನಾರಾವಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




0 Comments