ರೈತರ ವಿರುದ್ಧ ದಬ್ಬಾಳಿಕೆ ಮುಂದುವರೆದರೆ ಉಗ್ರ ಹೋರಾಟ : ಕೇಮಾರು ಶ್ರೀ ಎಚ್ಚರಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ರೈತರ ವಿರುದ್ಧ ದಬ್ಬಾಳಿಕೆ ಮುಂದುವರೆದರೆ ಉಗ್ರ ಹೋರಾಟ : ಕೇಮಾರು ಶ್ರೀ ಎಚ್ಚರಿಕೆ

ಮೂಡುಬಿದಿರೆ: ಅವಿಭಜಿತ ಜಿಲ್ಲೆಗೆ ಎಲ್ಲೆಲ್ಲಿಂದಲೂ ಕಂಪೆನಿಗಳನ್ನು ತಂದು ಕಸದಬುಟ್ಟಿಯಂತೆ ನೋಡಲಾಗುತ್ತಿದೆ. ಇಲ್ಲಿನ ರೈತರನ್ನು ಶೋಷಿಸಿ ಕೈಗಾರಿಕೆಯನ್ನು ಸ್ಥಾಪಿಸಿರುವುದರಿಂದ ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. 

 ಇಲ್ಲಿನ ಧಾರಣ ಸಾಮಥ್ಯ೯ವನ್ನು ಅರಿಯದೇ ಕೋಟಿ ವಿದ್ಯೆಯಲ್ಲಿ ಲೂಟಿ ವಿದ್ಯೆಯೇ ಮೇಲೂ ಎನ್ನುವಂತೆ ಆಡಳಿತ ವಗ೯ದವರು ವತಿ೯ಸುತ್ತಿದ್ದಾರೆ. ಯಾವುದೇ ಸಂದಭ೯ದಲ್ಲಿ ರೈತರ ಮೇಲಿನ ದೌಜ೯ನ್ಯ ಸಹಿಸುವುದಿಲ್ಲ. ಮುಂದುವರೆಸಿದರೆ ಗುತ್ತಿಗೆ ಕಂಪೆನಿಗಳ ವಿರುದ್ಧ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಎಚ್ಚರಿಸಿದರು. 


 ಅವರು ಸ್ಟೆರ್‌ಲೈಟ್ ವಿದ್ಯುತ್ ಕಂಪೆನಿಯು ಅಶ್ವತ್ಥಪುರದಲ್ಲಿ 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಸಂದಭ೯ದಲ್ಲಿ ಆಗಿರುವ ಕೃಷಿ ನಾಶ, ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ಮಾಡಿರುವ ದೌಜ೯ನ್ಯ ವನ್ನು ಖಂಡಿಸಿ ರೈತರು ಅಶ್ವತ್ಥಪುರದಲ್ಲಿ ಶನಿವಾರ ನಡೆಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.


ಕಟೀಲು ದೇವಸ್ಥಾನದ ಅನಂತ ಆಸ್ರಣ್ಣ ಮಾತನಾಡಿ, ಅನ್ನ ನೀಡುವ ರೈತರ ಮೇಲಿನ ದೌಜ೯ನ್ಯ ಸಹಿಸಲು ಅಸಾಧ್ಯ. ಆಡಳಿತವಗ೯, ಅಧಿಕಾರಿಗಳು ಅಂತಹ ಪ್ರಯತ್ನಗಳನ್ನು ಮಾಡಬಾರದು. ದೌಜ೯ನ್ಯಗಳು ನಡೆದರೆ ಅದರ ಪರಿಣಾಮವನ್ನು ಸಂಬಂಧಪಟ್ಟವರು ಎದುರಿಸಬೇಕಾಗುತ್ತದೆ ಎಂದರು. 

ಭಾರತೀಯ ಕಿಸಾಮ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ, ರೈತರ ಮೇಲೆ ನಿರಂತರವಾಗಿ ದರ‍್ಜನ್ಯ ನಡೆಯುತ್ತಿದೆ. ಮೂಡುಬಿದಿರೆ ಮತ್ತೊಂದು ನಂದಿಕೂರು ಗ್ರಾಮವಾಗುವ ಆತಂಕವಿದೆ. ಸಹಸ್ರಾರು ರೈತರು ಒಗ್ಗೂಡಿ ರೈತವಿರೋಧಿ ಯೋಜನೆಗಳನ್ನು ಹಿಮ್ಮೆಟಿಸುವ ಬಲ ನಮ್ಮಲ್ಲಿದೆ ಎಂದು ಎಚ್ಚರಿಸಿದರು. 


ಮೂಡುಬಿದಿರೆ ತಾಲೂಕು ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಕಾಯ೯ಕ್ರಮದಲ್ಲಿ

ತೆಂಕಮಿಜಾರು ಗ್ರಾಪಂ ಅಧ್ಯಕ್ಷೆ ಶಾಲಿನಿ, ಸದಸ್ಯರು, ರೈತ ಮುಖಂಡ ನಾರಾಯಣ ಸ್ವಾಮಿ, ಪ್ರಮುಖರಾದ ಕೆ.ಪಿ ಸುಚರಿತ ಶೆಟ್ಟಿ, ಕೃಷ್ಣಪ್ರಸಾದ್ ತಂತ್ರಿ, ಸುಕೇಶ್ ಶೆಟ್ಟಿ, ಪ್ರವೀಣ್ ಭಂಡಾರಿ, ವಸಂತ ಭಟ್, ರವಿರಾಜ್, ಸುರೇಶ್ ಶೆಟ್ಟಿ ದೋಟ, ಬಾಲಕೃಷ್ಣ ದೇವಾಡಿಗ, ಭಾಸ್ಕರ ಶೆಟ್ಟಿ, ಅಲ್ಫೋನ್ಸ್ ನಿಡ್ಡೋಡಿ, ಕೃಷ್ಣಮೂತಿ೯ ಮತ್ತಿತರರಿದ್ದರು.

---

ಅಂಚೆ ಕಾಡ್೯ ಅಭಿಯಾನ: 

ರೈತರ ಮೇಲಿನ ದೌಜ೯ನ್ಯ ನಿಲ್ಲಲಿ,ಭೂಮಿ ಉಳಿಸಿ,ಬದುಕಲು ಬಿಡಿ" ಎಂಬ ಘೋಷವಾಕ್ಯದೊಂದಿಗೆ ಸೀತಾರಾಮ ದೇವಳದಿಂದ ಒಂಟಿಮಾರು ಸಂತ್ರಸ್ತ ಕೃಷಿಕ ಭಾಸ್ಕರ್ ಶೆಟ್ಟಿ ಅವರ ಕೃಷಿಭೂಮಿಯವರೆಗೆ ಜಾಥ ನಡೆಯಿತು. ಜಾಥದ ಮೊದಲು ದೇವಳದಲ್ಲಿ ವಿಶೇಷ ಪ್ರಾಥ೯ನೆ ಸಲ್ಲಿಸಲಾಯಿತು. ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನಸೆಳೆಯಲು ಅಂಚೆ ಕಾಡ್೯ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

--------

Post a Comment

0 Comments