ಇನ್ನರ್ ವ್ಹೀಲ್ ಕ್ಲಬ್ ಚೇರ್ ಮೆನ್ ಮೂಡುಬಿದಿರೆಗೆ ಭೇಟಿ
ಮೂಡುಬಿದಿರೆ : ಇನ್ನರ್‌ವೀಲ್ ಕ್ಲಬ್ ಮೂಡುಬಿದಿರೆಗೆ ಇನ್ನರ್‌ವೀಲ್ ಕ್ಲಬ್ ಜಿಲ್ಲೆ 318 ಚೇರ್‌ಮೆನ್ ಶಬರಿ ಕಡಿದಾಳ್ ಸೋಮವಾರ ಭೇಟಿ ನೀಡಿದರು.
ಸ್ವರಾಜ್ಯ ಮೈದಾನ ಬಳಿ ನವೀಕರಣಗೊಳಿಸಲಾದ ಇನ್ನರ್‌ವೀಲ್ ವೃತ್ತ ಹಾಗೂ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ವಿನೂತನ ಮಾದರಿಯ ಬಾಟಲಿ ತ್ಯಾಜ್ಯ ವಿಲೇ ಮಾಡುವ ಕಸದ ಬುಟ್ಟಿಯನ್ನು ಉದ್ಘಾಟಿಸಿದ ಅವರು ಕ್ಲಬ್‌ನ ಚಟುವಟಿಕೆಗಳನ್ನು ಶ್ಲಾಘಿಸಿದರು.
ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ, ಮೂಡುಬಿದಿರೆಯ ಇನ್ನರ್‌ವೀಲ್ ಕ್ಲಬ್ ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಪುರಸಭೆಯೊಂದಿಗೆ ಪ್ರತಿ ಹಂತದಲ್ಲೂ ಸಂಪರ್ಕದಲ್ಲಿದೆ. ಉದ್ಘಾಟನೆಗೊಂಡಿರುವ ಎರಡೂ ಯೋಜನೆಗಳ ನಿರ್ವಹಣೆಯನ್ನು ಪುರಸಭೆಯಿಂದ ಮಾಡುತ್ತೇವೆ ಎಂದು ಭರವಸೆಯಿತ್ತರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ವಾರ್ಡ್ ಸದಸ್ಯ ರಾಜೇಶ್ ನಾಯ್ಕ್, ಪುರಸಭೆ ಸದಸ್ಯರು, ಪರಿಸರ ಅಭಿಯಂತರೆ ಶಿಲ್ಪಾ ಎಸ್., ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಕಾರ್ಯದರ್ಶಿ ಅನಿತಾ ಪೃಥ್ವಿರಾಜ್ ಶೆಟ್ಟಿ, ಪ್ರಮುಖರಾದ ಜಯಶ್ರೀ ಅಮರನಾಥ ಶೆಟ್ಟಿ, ಶಾಲಿನಿ ಹರೀಶ್ ನಾಯಕ್, ಸುಜಯ ವೇದ ಕುಮಾರ್, ಕಲಾವತಿ ಹೆಗ್ಡೆ, ಸಹನಾ ನಾಗರಾಜ್, ಇನ್ನರ್‌ವೀಲ್ ಕ್ಲಬ್ ಸದಸ್ಯರು, ಪುರಸಭೆ ಪೌರಕಾರ್ಮಿಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
0 Comments