ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳು : ಕ್ರಮ ಕೈಗೊಳ್ಳದ ಪುರಸಭೆ, ಪೊಲೀಸ್ ಇಲಾಖೆ

ಜಾಹೀರಾತು/Advertisment
ಜಾಹೀರಾತು/Advertisment

 ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳು : ಕ್ರಮ ಕೈಗೊಳ್ಳದ ಪುರಸಭೆ, ಪೊಲೀಸ್ ಇಲಾಖೆ

ಮೂಡುಬಿದಿರೆ : ಇಲ್ಲಿನ ಬಸ್ ನಿಲ್ದಾಣದ ಬಳಿ ಇರುವ ಇಂದಿರಾಗಾಂಧಿ ವಾಣಿಜ್ಯ ಸಂಕೀಣ೯ ಬಳಿ ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು 15 ದಿನಗಳ ಮೊದಲು ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರೂ ಈವರೆಗೆ ಸರಿಯಾಗದೆ ಯಥಾ ಸ್ಥಿತಿ ಯಲ್ಲಿಯೇ ಮುಂದುವರೆದಿದೆ. 

   ಸೆ. 29ರಂದು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಮೂಡುಬಿದಿರೆಯಲ್ಲಿ ಪೇಟೆಯಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆ,ಇಂದಿರಾಗಾಂಧಿ ವಾಣಿಜ್ಯ ಸಂಕೀಣ೯ದ ಬಳಿ ಸಹಿತ ನೋ ಪಾಕಿ೯ಂಗ್ ನಲ್ಲಿ  ಬೆಳಿಗ್ಗೆಯಿಂದ ಸಂಜೆವರೆಗೆ ದ್ವಿಚಕ್ರ ಮತ್ತು ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಗುವುದರಿಂದ ಬಸ್ ಗಳ ನಿಲುಗಡೆ ಮತ್ತು ವಾಣಿಜ್ಯ ಸಂಕೀಣ೯ದಲ್ಲಿ ಅಂಗಡಿ,ಕಛೇರಿಗಳನ್ನು ಹೊಂದಿರುವವ ವಾಹನ ನಿಲ್ಲಿಸಲು ಹಾಗೂ ಸಾವ೯ಜನಿಕ ಶೌಚಾಲಯಕ್ಕೆ ಹೋಗುವರಿಗೆ ದಾರಿ ಇಲ್ಲದಂತ್ತಾಗಿದೆ ಇದರಿಂದಾಗಿ ಸಾವ೯ಜನಿಕರು ತೊಂದರೆಯನ್ನು ಅನುಭವಿಸುತ್ತಿರುವ ಬಗ್ಗೆ ಸದಸ್ಯರು ಶಾಸಕರ ಗಮನಕ್ಕೆ   ತಂದಿದ್ದರು.   

 ಈ ಸಂದಭ೯ದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ಅವರು ಮಾತನಾಡಿ ಸಮಸ್ಯೆ ನಿವಾರಿಸಲು ಸಿಬಂದಿಗಳ ಕೊರತೆಯಿದೆ ಆದರೂ ಪರಿಹಾರಕ್ಕೆ ಆಧ್ಯತೆ ನೀಡುವೆ. ಅಕ್ಟೋಬರ್ ತಿಂಗಳಲ್ಲಿ 7 ಮಂದಿ ಪೊಲೀಸ್ ಸಿಬ್ಬಂದಿಗಳು ಸೇರ್ಪಡೆಯಾಗಲಿದ್ದರೆ ಸಧ್ಯ ಇರುವ ವ್ಯವಸ್ಥೆಯಲ್ಲಿ ಪೇಟೆಯ ಟ್ರಾಫಿಕ್ ಕಂಟ್ರೋಲ್‌ಗೆ ಹೆಚ್ಚಿನ ಆಧ್ಯತೆ ನೀಡುತ್ತೇವೆ ಎಂದಿದ್ದರು. 


  ಅದರಂತೆ ಒಂದೆರಡು ಬಾರಿ ಇನ್ಸ್ಪೆಕ್ಟರ್ ಸಂದೇಶ್ ಅವರೇ ಲಾಠಿ ಹಿಡಿದುಕೊಂಡು ಒನ್ ವೇಯಲ್ಲಿ ರಾಜಾರೋಷವಾಗಿ ಬರುವವರಿಗೆ ಸರಿಯಾದ ದಾರಿ ತೋರಿಸಿದ್ದರು ಆದರೆ ಬಸ್ ನಿಲ್ದಾಣದ ಸಹಿತ ನೋ ಪಾಕಿ೯ಂಗ್ ನಲ್ಲಿ ಆಗುತ್ತಿರುವ ಸಮಸ್ಯೆಯನ್ನು ನೋಡಲು ಅವರೂ ಬಂದಿಲ್ಲ ಪುರಸಭೆಯ ಅಧಿಕಾರಿಗಳು ಕೂಡಾ ಬಂದಿಲ್ಲ ಇದರಿಂದಾಗಿ ಈ ಸಮಸ್ಯೆ ಹಾಗೆಯೇ ಮುಂದುವರೆದಿದೆ. 


 ಈ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಪೊಲೀಸ್ ಇಲಾಖೆಯ ಜತೆ ಪುರಸಭೆಯೂ ಜಂಟಿಯಾಗಿ ಕತ೯ವ್ಯ ನಿವ೯ಹಿಸುವ ಅಗತ್ಯವಿದೆ ಆದರೆ ಎರಡೂ ಇಲಾಖೆಗಳು ಮನಸ್ಸು ಮಾಡಬೇಕಾಗಿದೆ ಜತೆಗೆ ಪ್ರಜ್ಞಾವಂತ ನಾಗರಿಕರು ಸಹಕರಿಸುವ ಅಗತ್ಯತೆಯಿದೆ.

Post a Comment

0 Comments