ಹೆಗ್ಗಡೆ ಮಹಿಳಾ ಸಂಘ ಮೂಡುಬಿದಿರೆ ವಲಯದ ದಶಮಾನೋತ್ಸವ ಸ್ಥಾಪಕರಿಗೆ ಸನ್ಮಾನ
ಮೂಡುಬಿದಿರೆ : ಹೆಗ್ಗಡೆ ಮಹಿಳಾ ಸಂಘ ಮೂಡುಬಿದಿರೆ ವಲಯ ಇದರ ದಶಮಾನೋತ್ಸವ ಕಾರ್ಯಕ್ರಮ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷೆ ಉಷಾ ಕರುಣಾಕರ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕರಾದ ಲತಾ ಉಮೇಶ್ ಹೆಗ್ಡೆ ಹಾಗೂ ಅಪರ್ಣಾ ಪ್ರಸನ್ನ ಹೆಗ್ಡೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲತಾ ಹೆಗ್ಡೆ ಅವರು ಹೆಗ್ಗಡೆ ಸಮಾಜದ ಮಹಿಳೆಯರನ್ನು ಸಂಘಟಿಸಿ ಸಮಾಜದ ಅಭಿವೃದ್ಧಿಯಲ್ಲಿ ಹಾಗೂ ದೇವಸ್ಥಾನದ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಹತ್ತು ವರ್ಷದ ಹಿಂದೆ ಕೆಲವೇ ಮಂದಿ ಸೇರಿಕೊಂಡು ಕೋಟೆಬಾಗಿಲಿನಲ್ಲಿ ಮಹಿಳಾ ಸಂಘವನ್ನು ಪ್ರಾರಂಭಿಸಿದ್ದೆವು. ಇಂದು ಸಂಘ ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಸಾಧಿಸಿದೆ ಎಂದರು. ಸಂಘ ಸ್ಥಾಪನೆಗೆ ಸಹಕಾರ ನೀಡಿದ್ದ ವೀರಮಾರುತಿ ದೇವಸ್ಥಾನದ ಆಗಿನ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಮೊಕ್ತೇಸರ ಶ್ರೀಧರ್ ಹೆಗ್ಡೆ ಹಾಗೂ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಸ್ಥಾಪಕ ಅಧ್ಯಕ್ಷೆ ನಳಿನಿ ಆರ್. ಹೆಗ್ಡೆ, ಮಾಜಿ ಅಧ್ಯಕ್ಷೆಯರಾದ ಪೂರ್ಣಿಮಾ ಮೋಹನ್ ಹೆಗ್ಡೆ, ವಿನೋದ ಗಣೇಶ್ ಹೆಗ್ಡೆ ಹಾಗೂ ಮಾಜಿ ಕಾರ್ಯದರ್ಶಿ ಅಶ್ವಿನಿ ನವೀನ್ ಹೆಗ್ಡೆ ಉಪಸ್ಥಿತರಿದ್ದರು.
ಇದೇ ವೇಳೆ ಸಂಘದ ಮುಂದಿನ ಅವಧಿಗೆ ನೂತನ ಅಧ್ಯಕ್ಷೆಯಾಗಿ ಚೇತನಾ ರಾಜೇಂದ್ರ ಹೆಗ್ಡೆ ಮತ್ತು ಕಾರ್ಯದರ್ಶಿಯಾಗಿ ಸುಷ್ಮಾ ಸುರೇಶ್ ಹೆಗ್ಡೆ ಅವಿರೋಧ ಆಯ್ಕೆಯಾದರು.
ತಿಲಕ ದಿವಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಮತ ರತ್ನಾಕರ ಹೆಗ್ಡೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸಂಧ್ಯಾ ವಸಂತ ಹೆಗ್ಡೆ ವಂದಿಸಿದರು.
0 Comments