ಅಶ್ವತ್ಥಪುರದಲ್ಲಿ ಉಚಿತ ಯೋಗ ಶಿಕ್ಷಣ ತರಗತಿ ಉದ್ಘಾಟನೆ
ಮೂಡುಬಿದಿರೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ತುಮಕೂರು, ದ. ಕ. ಮಂಗಳೂರು, ಪೊಳಲಿ ನಗರದ ವತಿಯಿಂದ ತೆಂಕ ಮಿಜಾರು ಗ್ರಾಮ ಉಚಿತ ಪಂಚಾಯತ್ ವ್ಯಾಪ್ತಿಯ ವಿವಿದೋದ್ದೇಶ ಸಭಾಂಗಣ ಸಂತೆಕಟ್ಟೆ ಅಶ್ವಥಪುರ ಇಲ್ಲಿ ಉಚಿತ ಯೋಗ ಶಿಕ್ಷಣ ತರಗತಿಯು ಭಾನುವಾರ ಆರಂಭಗೊಂಡಿತು.
48 ದಿನಗಳ ಕಾಲ ನಡೆಯುವ ಉಚಿತ ಯೋಗ ಶಿಕ್ಷಣ ತರಬೇತಿಯನ್ನು ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಸಾಲ್ಯಾನ್ ಉದ್ಘಾಟಿಸಿ ಯೋಗವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಮತೋಲನದಲ್ಲಿರಿಸುತ್ತದೆ. ಇಲ್ಲಿನ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು. ಪೊಳಲಿ ನಗರದ ಸಂಘಟನಾ ಪ್ರಮುಖರಾದ ಕೃಷ್ಣ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಮಾತೃ ಶಾಖೆಯ ಶ್ರೀ ಕಾಲಬೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠ ಮಟ್ಟಿ ಈ ಶಾಖೆಯ ಯೋಗ ಬಂಧುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಯೋಗ ಶಿಕ್ಷಕರಾದ ಲೋಕೇಶ್, ಶಿವಪ್ರಸಾದ್, ಜನಾರ್ಧನ್, ಕೇಶವ, ಭುಜಂಗ, ಸುಜಾತ, ಕುಮಾರ ಉಪಸ್ಥಿತರಿದ್ದರು.
ವಿಶಾಲಾಕ್ಷಿ ಸ್ವಾಗತಿಸಿದರು. ದ.ಕ. ಜಿಲ್ಲಾ ಸಂಚಾಲಕ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಿನ್ ಯೋಗದ ಬಗ್ಗೆ ಮಾಹಿತಿ ನೀಡಿದರು. ಅಕ್ಷತಾ ಕಾಯ೯ಕ್ರಮ ನಿರೂಪಿಸಿದರು. ಭರತ್ ವಂದಿಸಿದರು.
0 Comments