ಮೂಡುಬಿದಿರೆ: ಸಿಡಿಲು ಬಡಿದು ಮನೆಗೆ ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಸಿಡಿಲು ಬಡಿದು ಮನೆಗೆ  ಹಾನಿ

ಮೂಡುಬಿದಿರೆ: ಸೋಮವಾರ ಸಂಜೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಬೈಲು ಕುಂಗೂರು ಎಂಬಲ್ಲಿ  ಮನೆಯೊಂದಕ್ಕೆ ಸಿಡಿಲು ಬಡಿದು  ಅಪಾರ ಪ್ರಮಾಣದ ಹಾನಿಯಾಗಿದ್ದು,  ಅಪಾರ ನಷ್ಟ ಉಂಟಾಗಿದೆ.

 ಕುಂಗೂರು ನಿವಾಸಿ ವಾಸು ಮುಗೇರ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯೊಳಗಿನ ವಿದ್ಯುತ್ ಉಪಕರಣಗಳು ಸೇರಿದಂತೆ ಇತರ ಸೊತ್ತುಗಳು ಸಿಡಿಲಾಘಾತದಿಂದ ಸಂಪೂರ್ಣವಾಗಿ ಹಾಳಾಗಿವೆ. ಘಟನೆಯಿಂದಾಗಿ ಮನೆಯ ಮಾಲೀಕರಿಗೆ ಅಪಾರ  ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ದಯಾನಂದ ಕೊಡ್ಯಡ್ಕ ಹಾಗೂ ಪಂಚಾಯತ್ ಸದಸ್ಯೆ ಸುಮಾ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

Post a Comment

0 Comments