ಸಮಾಜ ಮಂದಿರದಲ್ಲಿ 4ನೇ ವಷ೯ದ ಗೂಡುದೀಪ, ರಂಗೋಲಿ ಸ್ಪಧೆ೯
*ಗಮನ ಸೆಳೆದ ಕಸದಿಂದ ರಸ, ಗರಂ ಮಸಾಲೆ ಹಾಗೂ ತೆಂಗಿನ ಗರಿಯಿಂದ ಮೂಡಿದ ಗೂಡುದೀಪಗಳು
ಮೂಡುಬಿದಿರೆ: ದೀಪಾವಳಿ ಹಬ್ಬದ ಪ್ರಯುಕ್ತ ಸಮಾಜ ಮಂದಿರ ಸಭಾ(ರಿ) ಮತ್ತು ಯುವವಾಹಿನಿ ಮೂಡುಬಿದಿರೆ ಘಟಕ ಜಂಟಿಯಾಗಿ ಸಾರ್ವಜನಿಕರಿಗಾಗಿ ಏಪ೯ಡಿಸಿದ್ದ 4ನೇ ವರ್ಷದ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ರೀತಿಯ ರೀತಿಯ ಗೂಡುದೀಪಗಳನ್ನು ತಯಾರಿಸುವ ಮೂಲಕ ಹೀಗೂ ಗೂಡುದೀಪಗಳನ್ನು ತಯಾರಿಸಬಹುದೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಗೂಡುದೀಪ ಸ್ಪಧೆ೯ಯಲ್ಲಿ ಆಧುನಿಕ ವಿಭಾಗದಲ್ಲಿ ಮಂಗಳೂರಿನ ವಿಠಲ್ ಭಟ್ ಅವರು ಕಸದಿಂದ ರಸ ಎಂಬ ಶೀಷಿ೯ಕೆಯಡಿಯಲ್ಲಿ ಕಬ್ಬಿನ ಕಸದಿಂದ ರಚಿಸಿರುವ ಗೂಡುದೀಪ, ಸುಂಕದಕಟ್ಟೆಯ ವೈಶಾಲ್ ಅಂಚನ್ ಅವರು 15 ಬಗೆಯ ಸಾಂಬಾರ ಪದಾಥ೯ಗಳನ್ನು ಬಳಸಿ ನಿಮಿ೯ಸಿರುವ ಹಾಗೂ ಸಾಂಪ್ರದಾಯಿಕ ವಿಭಾಗದಲ್ಲಿ ಪಡುಮಾನಾ೯ಡು ಅಚ್ಚರಕಟ್ಟೆಯ ಬೋಜ ಅವರು ತೆಂಗಿನ ಗರಿಗಳನ್ನು ಬಳಸಿ ತಯಾರಿಸಿದ ಗೂಡುದೀಪಗಳು ವಿಶಿಷ್ಠ ರೀತಿಯಲ್ಲಿ ಮೂಡಿ ಬಂದು ಗಮನ ಸೆಳೆದವು.
ಮಾದರಿ ವಿಭಾಗದಲ್ಲಿ ರೋಹಿತ್ ನಾಯ್ಕ್ ಸಂಪಿಗೆ ಅವರು ತಯಾರಿಸಿರುವ ಶ್ರೀ ಕ್ಷೇತ್ರ ಪುತ್ತಿಗೆ ದೇವಸ್ಥಾನದ ಮಾದರಿ ಪ್ರತಿಕೃತಿ ಹಾಗೂ ರಂಜಿತ್ ಅವರು ತಯಾರಿಸಿರುವ ತಿರುಪತಿ ದೇವಸ್ಥಾನ, ಯತೀಶ್ ಆಚಾಯ೯ ಅವರ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಪಡುಮಾನಾ೯ಡಿನ ಕಿಶೋರ್ ರಚಿಸಿರುವ ಕೇದಾರನಾಥ ಹಾಗೂ ಸರಕಾರಿ ಶಾಲೆಯ ಪ್ರತಿಕೃತಿಗಳು ನೋಡುಗರ ಮನ ಸೆಳೆಯಿತು.
0 Comments