*ಸುಳ್ಯ ತಾಲೂಕು ಕಂದ್ರಪಾಡಿ ಜೈನ ಬಸದಿ ನೆಲಸಮ ಪ್ರಕರಣ. ರಕ್ಷಣೆ ನೀಡುವ ಭರವಸೆ ನೀಡಿದ ಅಪರ ಜಿಲ್ಲಾಧಿಕಾರಿಗಳು*
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪಾಡಿ ಎಂಬ ಸ್ಥಳದಲ್ಲಿ ಪ್ರಾಚೀನ ಜೈನ ಬಲ್ಲಾಳರಿಂದ ನಿರ್ಮಿಸಲ್ಪಟ್ಟ ಬಸದಿಯನ್ನು ಜೆಸಿಬಿ ಬಳಸಿ ನೆಲಸಮ ಮಾಡಿದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಜೈನ ಮುಖಂಡರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ ಸೂಕ್ತ ರಕ್ಷಣೆ ನೀಡುವಂತೆ ದೂರು ನೀಡಿದರು.
ಸೆಪ್ಟೆಂಬರ್ 29 ರ ಸ್ಥಳೀಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸುಳ್ಯ ಮತ್ತು ಪುತ್ತೂರಿನ ಜೈನ ಬಾಂಧವರು ಅಲ್ಲಿಗೆ ಹೋಗಿ ಸ್ಥಳ ಪರಿಶೀಲನೆ ನಡೆಸಿದರು ಸ್ಥಳೀಯ ವ್ಯಕ್ತಿ ಸ. ನ. 233 ರಲ್ಲಿರುವ ಸರಕಾರಿ ಜಾಗದಲ್ಲಿರುವ ಈ ಪ್ರಾಚೀನ ಕುರುಹುಗಳನ್ನು ನೆಲಸಮ ಮಾಡಿ ಕ್ಷೇತ್ರ ಪಾಲನ ಗುಡಿ ನಾಗನ ಕಲ್ಲು ಮತ್ತು ಆನೆ ಮೆಟ್ಟಿಲು ಗರ್ಭಗುಡಿಯ ಶಿಲಾಮಯ ಕಲ್ಲುಗಳನ್ನು ನೆಲಸಮ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಪುರುಷ ದೈವದ ಜೀರ್ಣೋದ್ದಾರ ಸಮಿತಿಯವರು ಸಭೆ ನಡೆಸಿ ಇದನ್ನು ಪ್ರತಿಭಟಿಸಿರುತ್ತಾರೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಪುತ್ತೂರಿನ ವಿಕೆ ಜೈನ್- ಸತೀಶ್ ಪಡಿವಾಳ್ -ಸುಳ್ಯ ಬಲ್ನಾಡು ಪೇಟೆಯ ಡಾ. ಪ್ರಭಾತ್ ಬಲ್ನಾಡು ಮಂಗಳೂರು ಜೈನ್ ಮಿಲನ್ ಅಧ್ಯಕ್ಷರಾದ ರತ್ನಾಕರ ಜೈನ್ ಉಪಾಧ್ಯಕ್ಷರಾದ ಮಹಾವೀರ್ ಪ್ರಸಾದ್ ಮೂಡುಬಿದರೆ ಜೈನ್ ಮಿಲನ್ ಅಧ್ಯಕ್ಷರಾದ ಮಹೇಂದ್ರ ಕುಮಾರ್ ಜೈನ್ ಮತ್ತು ಅನಂತವೀರ್ ಮುಂತಾದವರು ಸುಳ್ಯ ಬೆಳ್ತಂಗಡಿ ಪುತ್ತೂರು ಮಂಗಳೂರು ಕಾರ್ಕಳ ಬಂಟ್ವಾಳ ಮೊದಲಾದ ತಾಲೂಕು ಜೈನ ಬಾಂಧವರು ಸಹಿ ಮಾಡಿದ್ದ ದೂರನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.ಈ ಸಂದರ್ಭ ಮೂಡಬಿದ್ರೆ ಶ್ರೀ ಜೈನ ಮಠದ ಪೂಜ್ಯ ಜಗದ್ಗುರು ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ದೂರವಾಣಿ ಮೂಲಕ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿದರು
0 Comments