ಬಿಜೆಪಿ ಯುವಮೋಚಾ೯ದಿಂದ ಮೂಡುಬಿದಿರೆಯಲ್ಲಿ ಗೋ ಪೂಜೆ
ಮೂಡುಬಿದಿರೆ : ಬಿಜೆಪಿ ಯುವಮೋರ್ಚಾ ಮುಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ಸ್ವರಾಜ್ಯ ಮೈದಾನದ ವೀರ ಸಾವಕ೯ರ್ ನಗರ ಗೋಲ್ಯದ ದಿನೇಶ್ ನಾಯಕ್ ಅವರ ಮನೆಯಲ್ಲಿ ಬುಧವಾರ ಗೋ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್ , ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ , ಮಂಡಲ ಬಿಜೆಪಿ ಪ್ರ.ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಒಂಟಿಕಟ್ಟೆ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ನಿಶಾನ್ ಪೂಜಾರಿ, ಬಿಜೆಪಿಯ ಸಂಪತ್ ಪೂಜಾರಿ, ಆಶಾ ದಿನೇಶ್, ಗೌತಮ್ ರೈ, ನಾಗೇಶ್ ಪ್ರಭು, ದಿಶಾಂತ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡಲ ಯುವಮೋರ್ಚಾ ಪ್ರ. ಕಾರ್ಯದರ್ಶಿ ಭರತ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.




0 Comments