ಮೂಡುಬಿದಿರೆಯ ಖ್ಯಾತ ನ್ಯಾಯವಾದಿ ಶ್ವೇತಾ ಕೆ. ಅವರ ನೂತನ ಕಚೇರಿ ಉದ್ಘಾಟನೆ
ಮೂಡುಬಿದಿರೆ: ಇಲ್ಲಿನ ಖ್ಯಾತ ನ್ಯಾಯವಾದಿ ಮತ್ತು ನೋಟರಿ ಶ್ವೇತಾ ಕೆ. ಅವರ ನೂತನ ಕಚೇರಿಯು ಸ್ವರಾಜ್ಯ ಮೈದಾನದ ಮುಂಭಾಗದಲ್ಲಿರುವ ಕೋರ್ಟ್ ರಸ್ತೆಯ ಶೆಟ್ಟೀಸ್ ರಾಮಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು. ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಅವರು ದೀಪ ಪ್ರಜ್ವಲನದ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ನ್ಯಾಯವಾದಿಗಳಾದ ಎಂ. ಆರ್. ಬಲ್ಲಾಳ್, ಕೆ.ಆರ್. ಪಂಡಿತ್, ದಿವಿಜೇಂದ್ರ, ಎಂ.ಎಸ್. ತಂತ್ರಿ, ಕಟ್ಟಡದ ಮಾಲೀಕ ಪಾಲಡ್ಕ ಹರಿಪ್ರಸಾದ್ ಶೆಟ್ಟಿ, ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್, ಪ್ರಭಾತ್ ಸಿಲ್ಕ್ ನ ಪ್ರಭಾಚಂದ್ರ ಜೈನ್, ರಾಜವರ್ಮ ಬೈಲಂಗಡಿ, ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಹರೀಶ್ ಎಂ.ಕೆ., ನಿಕಟಪೂರ್ವ ಅಧ್ಯಕ್ಷ ಪೂರ್ಣಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಶ್ವೇತಾ ಕೆ. ಮತ್ತು ಕು. ಪ್ರಮಯಿ ಅತಿಥಿಗಳನ್ನು ಗೌರವಿಸಿದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.
0 Comments