ಇಂದು ಮೂಡುಬಿದಿರೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ *ಪೇಟೆಯಲ್ಲಿ ವಾಹನ ಪಾಕಿ೯ಂಗ್ ಮಾಡದಂತೆ ಪೊಲೀಸರ ಮನವಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಇಂದು ಮೂಡುಬಿದಿರೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ 

*ಪೇಟೆಯಲ್ಲಿ ವಾಹನ ಪಾಕಿ೯ಂಗ್ ಮಾಡದಂತೆ ಪೊಲೀಸರ ಮನವಿ

         ಮೂಡುಬಿದಿರೆ : ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವದ ವಿಸಜ೯ನಾ ಮೆರವಣಿಗೆಯು ನಾಳೆ (ಭಾನುವಾರ) ನಡೆಯಲಿರುವುದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು ಮೂಡುಬಿದಿರೆ ಪೇಟೆಗೆ ವಾಹನಗಳು ಬರದಂತೆ ನಿಬ೯ಂಧಿಸಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಅವರು ಇಲಾಖೆಯ ಪರವಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಮಧ್ಯಾಹ್ನ  2-00 ಗಂಟೆಯ ನಂತರ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದು ಮೂಡುಬಿದಿರೆ ಪೇಟೆಗೆ ವಾಹನಗಳು ಬಾರದಂತೆ ನಿರ್ಬಂಧಿಸಲಾಗಿದೆ. ಆದ್ದರಿಂದ  ಸಾರ್ವಜನಿಕರು ತಮ್ಮ ವಾಹನಗಳನ್ನು  ಮೂಡುಬಿದಿರೆಯ ನಗರಕ್ಕೆ ತರದೇ  ಹೊರವರ್ತುಲ (ಬೈಪಾಸ್) ರಸ್ತೆಯಲ್ಲಿ ವಿಸರ್ಜನಾ ಮೆರವಣಿಗೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಮುಗಿಯುವವರೆಗೂ ಸಂಚರಿಸುವಂತೆ  ತಿಳಿಸಿದ್ದಾರೆ.

ಅಲ್ಲದೆ ಸಾರ್ವಜನಿಕ ಗಣೇಶ  ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಬೆಳಗ್ಗೆ 8:30 ಗಂಟೆಯಿಂದ ಹುಲಿ ಕುಣಿತ ಇತರ ಕಾರ್ಯಕ್ರಮಗಳು ಪೇಟೆಯಲ್ಲಿ ಪ್ರಾರಂಭವಾಗುವುದರಿಂದ ಸಾರ್ವಜನಿಕರು ಬೆಳಗ್ಗೆಯಿಂದಲೇ ಮೂಡುಬಿದಿರೆ ಪೇಟೆಗೆ ಬಂದು ವಾಹನಗಳನ್ನು ಪಾರ್ಕಿಂಗ್ ಮಾಡಬಾರದಾಗಿ ವಿನಂತಿಸಿದ್ದಾರೆ.

Post a Comment

0 Comments

Advertisement