ಲಯನ್ಸ್ ಕ್ಲಬ್ ನಿಂದ ಕಾರ್ಗಿಲ್ ದಿನ ಆಚರಣೆ : ನಿವೃತ್ತ ಯೋಧಗೆ ಸನ್ಮಾನ
ಮೂಡುಬಿದಿರೆ : ಕಾರ್ಗಿಲ್ ದಿನಾಚರಣೆಯ ಅಂಗವಾಗಿ ನಿವೃತ್ತ ಯೋದ ಸದಾಶಿವ ಶೆಟ್ಟಿ ಅವರನ್ನು ಕೀತಿ೯ನಗರದಲ್ಲಿರುವ ಲಯನ್ಸ್ ಪಾರ್ಕ್ ಹರಿಭವ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಲಯನ್ಸ್ ಅಧ್ಯಕ್ಷ ಲ.ಶಿವಪ್ರಸಾದ್ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಲಯಾಧ್ಯಕ್ಷ ಲ.ಜೋಸ್ಸಿ ಮೆನೇಜಸ್, ಪೂರ್ವಾಧ್ಯಕ್ಷ
ಬೋನವೆಂಚರ್ ಮೆನೇಜಸ್ , ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿ ಹರೀಶ್ ತಂತ್ರಿ, ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಪತ್ರವನ್ನು ನವಾನಂದ ಅವರು ವಾಚಿಸಿದರು. ಲ.ಶಿವಪ್ರಸಾದ್ ಹೆಗ್ಡೆ ಕಾಯ೯ಕ್ರಮ ನಿರ್ವಹಿಸಿದರು. ಓಸ್ವಾಲ್ಡ್ ಅವರು ಧನ್ಯವಾದಗೈದರು.
0 Comments