ಪವರ್ ಫ್ರೆಂಡ್ಸ್ ಬೆದ್ರದಿಂದ ಕುಟುಂಬ ಸಮ್ಮಿಲನ, ಪಿಲಿ ನಲಿಕೆ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ : ಪವರ್ ಫ್ರೆಂಡ್ಸ್ ಬೆದ್ರದ ಕುಟುಂಬ ಸಮ್ಮಿಲನ ಹಾಗೂ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆಯುವ ಪಿಲಿ ನಲಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮೂಡುಬಿದಿರೆ ರಿಂಗ್ ರೋಡ್ ನ ಪ್ರೀತಮ್ ಗಾರ್ಡನ್ ಹಾಲ್ ನಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಚೌಟರ ಅರಮನೆಯ ಕುಲದೀಪ್ ಎಂ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
ಪವರ್ ಫ್ರೆಂಡ್ಸ್ ಪ್ರಶಸ್ತಿ ಪ್ರದಾನ : ಹಲವು ಬಾರಿ ರಕ್ತದಾನ ಮಾಡಿರುವ ಪ್ರವೀಣ್ ಪೈನ್ ಜೈನ್ ಬೆಳುವಾಯಿ, ಪವರ್ ಫ್ರೆಂಡ್ಸ್ ಬೆದ್ರ ಮತ್ತು ಅಂಚೆ ಇಲಾಖೆ ಜಂಟಿಯಾಗಿ ಹಮ್ಮಿಕೊಳ್ಳುತ್ತಾ ಬಂದಿರುವ ಆಧಾರ್ ನೋಂದಣಿ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ನಿರಂತರ ಸಹಕಾರ ನೀಡುತ್ತಾ ಬಂದಿರುವ ಶಿಕ್ಷಕ ನೋರ್ಬಟ್ ಹಾಗೂ ಮಂಗಳೂರು ಪುರಭವನದಲ್ಲಿ ಒಂದು ದಿನ ಪೂರ್ತಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹಾಡನ್ನು ಹಾಡಿ ವಿಶ್ವ ದಾಖಲೆ ಮಾಡಿರುವ ಯಶವಂತ ಎಂ.ಜಿ. ಅವರಿಗೆ ಪವರ್ ಫ್ರೆಂಡ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ, ಉದ್ಯಮಿ ಶ್ರೀಪತಿ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ, ವಕೀಲ ಸುರೇಶ್ ಕೆ. ಪೂಜಾರಿ, ಸಿಂಚನ ಸಂಸ್ಥೆಯ ಸಂಗೀತಾ ಎಂ. ಪ್ರಭು, ಪ್ರಭಾತ್ ಸಿಲ್ಕ್ ನ ಪೂರ್ಣಚಂದ್ರ ಜೈನ್, ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಹರೀಶ್ ಎಂ. ಕೆ. ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಂಕರ ಎ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
0 Comments