ಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ


 ಮೂಡುಬಿದಿರೆ: ಶಾಲಾ ಸಂಸತ್ತು ನಾಯಕತ್ವದ ಬೆಳವಣಿಗೆಗೆ ಅಡಿಪಾಯ ಒದಗಿಸುವ ವೇದಿಕೆ. ವೇದಿಕೆಯ ಮೇಲಿರುವವರು ಮಾತ್ರ ನಾಯಕರಲ್ಲ ಮುಂಭಾಗದಲ್ಲಿರುವವರು ನಾಯಕರಾಗುವ ಯೋಗ್ಯತೆಯನ್ನು ಹೊಂದಿರುತ್ತಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅಭಿಪ್ರಾಯಪಟ್ಟರು. 


ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿದರು.

ವಕೀಲ ಜಿನೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿದ್ದರು.

ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿ ಸಂಸತ್ತು ಕಲಿಕೆಯನ್ನು ಪಾಯೋಗಿಕವಾಗಿ ಅನುಭವಿಸುವ ಒಂದು ಉತ್ತಮ 

ವೇದಿಕೆ.ಅದು ನಾಯಕತ್ವ ಮತ್ತು ಜವಾಬ್ದಾರಿಯ ಮೌಲ್ಯವನ್ನು ಬೆಳೆಸುತ್ತದೆ. ವ್ಯಕ್ತಿಯ ವರ್ತನೆ, ನಡತೆಗಳೇ ವ್ಯಕ್ತಿತ್ವದ ಮಾನದಂಡ. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದರು.

ಮಿಥುನ್ ರೈ ಹಾಗೂ ಜಿನೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್, ಉಪ ಮುಖ್ಯ ಶಿಕ್ಷಕ ಜಯಶೀಲ ಉಪಸ್ಥಿತರಿದ್ದರು. 

ವೆನಿಸ್ಸಾ ನೊರೋನ್ಹಾ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಹಿತೇಶ್ ನಾಯಕ್ ಸ್ವಾಗತಿಸಿ, ರೀನಲ್ ರಿನ್ಸಿಯಾ ಸೆರಾವೋ ವಂದಿಸಿದರು.

Post a Comment

0 Comments