ಮೂಡುಬಿದಿರೆಯಲ್ಲಿ ಣಮೋಕಾರ ಮಂತ್ರ ಪಠಣ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಣಮೋಕಾರ ಮಂತ್ರ ಪಠಣ

ಮೂಡುಬಿದಿರೆ: ಒಂದು ಜಗತ್ತು, ಒಂದು ಮಂತ್ರ, ಶಾಂತಿಗಾಗಿ ಜೊತೆಯಲ್ಲಿ ಎಂಬ ಧ್ಯೇಯದೊಂದಿಗೆ ಜೀತೋ ಸಂಸ್ಥೆ ವಿಶ್ವದಾದ್ಯಂತ ಏರ್ಪಡಿಸಿದ್ದ ವಿಶ್ವ ಣಮೋಕಾರ ಮಂತ್ರ ದಿವಸ ಇದರ ಅಂಗವಾಗಿ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ, ಬಸದಿ ಸ್ವಚ್ಛತಾ ತಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸಮಸ್ತ ಜೈನ ಬಾಂಧವರು ಮೂಡುಬಿದಿರೆ ಇವರಿಂದ ಜೈನ ಕಾಶಿ ಮೂಡುಬಿದಿರೆಯಲ್ಲಿ ಸಾವಿರ ಕಂಬದ ಬಸದಿ ಎಂದೇ ಪ್ರಸಿದ್ಧವಾಗಿರುವ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಸಾಮೂಹಿಕವಾಗಿ ಣಮೋಕಾರ ಮಂತ್ರವನ್ನು ಪಠಿಸಲಾಯಿತು.

 ಇಂದು 108 ದೇಶಗಳಲ್ಲಿ ಏಕಕಾಲದಲ್ಲಿ ಬೆಳಗ್ಗೆ ಏಳರಿಂದ ಹತ್ತು ಗಂಟೆಯವರೆಗೆ ಣಮೋಕಾರ ಮಂತ್ರವನ್ನು ಪಠಿಸಲಾಯಿತು. ಭಾರತದಲ್ಲಿ ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು  ದೆಹಲಿಯ ವಿಜ್ಞಾನ ಭವನದಲ್ಲಿ  ಕಾರ್ಯಕ್ರಮವನ್ನು ಉದ್ಘಾಟಿಸಿರುತ್ತಾರೆ.

Post a Comment

0 Comments