ವೃದ್ಧೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿ ಪರಾರಿ


 ವೃದ್ಧೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿ ಪರಾರಿ

  ಮೂಡುಬಿದಿರೆ :'

      ದಾರಿ ಕೇಳುವ ನೆಪದಲ್ಲಿ ವೃದ್ಧೆಯೋವ೯ರ ಕುತ್ತಿಗೆಯಿಂದ  3-4 ಪವನಿನ ಕರಿಮಣಿ ಸರವನ್ನು ಎಗರಿಸಿದ ಘಟನೆ  ಬೆಳುವಾಯಿ ಸಮೀಪ ಸೋಮವಾರ ನಡೆದಿದೆ.

    ಬೆಳುವಾಯಿ ಗ್ರಾಮದ ಕಾಯಿದೆ ಮನೆಯ ನಿವಾಸಿ ಎಪ್ಪತ್ತರ ಹರೆಯದ ಇಂದಿರಾ  ಅವರು ಸೋಮವಾರದಂದು ತನ್ನ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಮುಗಿಸಿಕೊಂಡು ಬೆಳುವಾಯಿ- ಕರಿಯಣಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.

    ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ಯುವಕನೊಬ್ಬ ಬೆಳುವಾಯಿಗೆ ಹೋಗುವ ದಾರಿ ಯಾವುದು ' ಎಂದು ಕೇಳಿ ಮಾತನಾಡುತ್ತಲೇ ಆಕೆಯ ಕುತ್ತಿಗೆಗೆ ಕೈ ಹಾಕಿ  ಕರಿಮಣಿ ಎಳೆದಿದ್ದಾನೆ, ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ದೂಡಿಹಾಕಿ ಕರಿಮಣಿ ಎಗರಿಸಿಕೊಂಡು ಹೋಗಿದ್ದಾನೆ.

  ನೆಲಕ್ಕೆ ಬಿದ್ದ ಇಂದಿರಾ ಅವರಿಗೆ ಗಾಯಗಳಾಗಿದ್ದು ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಯುವಕ ಚಡ್ಡಿ ಮತ್ತು ಹಸಿರು ಬಣ್ಣದ ಶರ್ಟ್ ಹಾಕಿದ್ದನೆನ್ನಲಾಗಿದೆ. ಈ ಬಗ್ಗೆ ಇಂದಿರಾ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ತನಿಖೆ ನಡೆಸುತ್ತಿದ್ದಾರೆ.

Post a Comment

0 Comments

Advertisement