ಪ್ರಧಾನಿ ಮೋದಿ ಭೇಟಿಯಾದ ಸಂಸದ ಚೌಟ ಕುಟುಂಬ: ಇದು ಧನ್ಯತಾ ಕ್ಷಣ ಎಂದ ಕ್ಯಾಪ್ಟನ್

ಜಾಹೀರಾತು/Advertisment
ಜಾಹೀರಾತು/Advertisment

 ಪ್ರಧಾನಿ ಮೋದಿ ಭೇಟಿಯಾದ ಸಂಸದ ಚೌಟ ಕುಟುಂಬ: ಇದು ಧನ್ಯತಾ ಕ್ಷಣ ಎಂದ ಕ್ಯಾಪ್ಟನ್

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಇಂದು ಅವರ ದೆಹಲಿಯ ಕಚೇರಿಯಲ್ಲಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಮ್ಮ ಹೆತ್ತವರೊಂದಿಗೆ ಭೇಟಿಯಾದರು.


ಈ ಸಂಬಂಧ ಸಂತಸ ಹಂಚಿಕೊಂಡ ಸಂಸದರು "ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮತ್ತು


ಪಾರ್ಟಿಯ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿ ಇಂದು ವಿಶ್ವ ನಾಯಕನ ಜೊತೆ ನಿಲ್ಲುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಅಮೂಲ್ಯವಾದದ್ದು ಮತ್ತು ಇದನ್ನು ವರ್ಣಿಸಲು ಪದಗಳು ಸಾಲದು. ರಾಜಕೀಯದಲ್ಲಿ ತೊಡಗಿಸುವ ಕನಸನ್ನು ನೆಟ್ಟು ಅದನ್ನು ನನಸಾಗಿಸುವ ಭರವಸೆ ನೀಡಿದ ನಾಯಕರು ಮೋದಿ ಜೀ ಆದ ಕಾರಣ ಈ ಕ್ಷಣ ನನಗೆ ಮತ್ತಷ್ಟು ಹತ್ತಿರವಾಗಿದೆ" ಎಂದು ಹೇಳಿದ್ದಾರೆ.


ತುಳುನಾಡಿನ ಸಂಸ್ಕೃತಿಯ ಸಂಕೇತವಾದ 'ಹುಲಿಯ ತಲೆ'ಯ ಮಾದರಿಯನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.

Post a Comment

0 Comments