ಬಳ್ಕುಂಜೆ-ಫಲಿಮಾರು ಸಂಪಕ೯ ಸೇತುವೆ ನಿಮಾ೯ಣ : ಶಾಸಕ ಕೋಟ್ಯಾನ್ ಭರವಸೆ

ಜಾಹೀರಾತು/Advertisment
ಜಾಹೀರಾತು/Advertisment

 ಬಳ್ಕುಂಜೆ-ಫಲಿಮಾರು ಸಂಪಕ೯ ಸೇತುವೆ ನಿಮಾ೯ಣ :  ಶಾಸಕ ಕೋಟ್ಯಾನ್ ಭರವಸೆ


ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ   ಕೊಲ್ಲೂರು ಕಾಂತಾಬಾರೆ - ಬೂದಾಬಾರೆ ಬಸ್ ನಿಲ್ದಾಣದ ಬಳಿಯಿಂದ ಮುಖ್ಯ ರಸ್ತೆವರೆಗೆ ರೂ 3 ಕೋಟಿ  ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಕಾಮಗಾರಿಗೆ ಮತ್ತು 

ರೂ 3.50 ಕೋ. ವೆಚ್ಚದಲ್ಲಿ ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ರಾಡಿ ರಾಜ್ಯ ಹೆದ್ದಾರಿಯ ಕಿಲೋಮೀಟರ್ 21.18 ರ ಪೆರ್ಮುದೆ ಜಂಕ್ಷನ್ ನಿಂದ ಕಟೀಲು ಕಡೆಗೆ ತಿರುವು ಅಭಿವೃದ್ಧಿ ಕಾಮಗಾರಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಸೋಮವಾರ ಶಿಲಾನ್ಯಾಸಗೈದರು.


  ನಂತರ ಮಾತನಾಡಿದ ಕೋಟ್ಯಾನ್ ಅವರು ಗ್ರಾಮೀಣ ಪ್ರದೇಶ ರಸ್ತೆಗಳು ಅಭಿವೃದ್ಧಿ ಹೊಂದಬೇಕೆಂಬ ದೃಷ್ಟಿಯಿಂದ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ದ. ಕ ಮತ್ತು ಉಡುಪಿ ಜಿಲ್ಲೆಗೆ ಸಂಪಕ೯ ಕಲ್ಪಿಸುವ ಬಳ್ಕುಂಜೆ ಸೇತುವೆಯು ಅಪಾಯದಲ್ಲಿದ್ದು ಇಲ್ಲಿ ಘನ ವಾಹನಗಳ ಸಂಚಾರವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಹೊಸ ಸೇತುವೆ ನಿಮಾ೯ಣಕ್ಕೆ ರೂ 30 ಕೋ. ತಗಲಲಿದ್ದು ಅದನ್ನು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿಮಾ೯ಣಕ್ಕೆ ರೂ 1000 ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದು ಅದರಲ್ಲಿ ಬಳ್ಕುಂಜೆ ಮತ್ತು ಫಲಿಮಾರು ಸೇತುವೆ ನಿಮಾ೯ಣ ಮಾಡಲಾಗುವುದೆಂದು ತಿಳಿಸಿದರು.

 ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜಾ, ಉಪಾಧ್ಯಕ್ಷ ನವೀನ್ ಶೆಟ್ಟಿ ಸದಸ್ಯರಾದ ರಾಜೇಶ್ ಶೆಟ್ಟಿ, ಆನಂದ ಕೊಲ್ಲೂರು, ವನಿತಾ, ವನಿತಾ ಪೂಜಾರಿ, ಶಾಂತಾ,ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ತಾ. ಪಂ. ಮಾಜಿ ಸದಸ್ಯೆ ರಶ್ಮಿ ಆಚಾಯ೯, ಸ್ಥಳೀಯರಾದ ಎಲ್ಲಪ್ಪ ಟಿ. ಸಾಲ್ಯಾನ್, ವಿಲ್ಸನ್ ರೊಡ್ರಿಗಸ್, ಕೇಸರಿ ಪಿ., ವನಿತಾ ಪೂಜಾರಿ, ಜಯಲಕ್ಷ್ಮೀ, ಡೆನ್ನೀಸ್ ಡಿ'ಸೋಜಾ, ಜಾಯ್ ಡಿ'ಸೋಜಾ,ವಿಜಯ ಶೆಟ್ಟಿ, ಪ್ರಾನ್ಸಿಸ್ ಡಿ'ಸೋಜಾ, ಹರಿಪ್ರಸಾದ್ ಶೆಟ್ಟಿ, ದಿನೇಶ್ ದೇವಾಡಿಗ, ಧನಂಜಯ ಕವತ್ತಾರ್, ಶುಭ ಭಂಡಾರಿ ಮತ್ತು ಗುತ್ತಿಗೆದಾರ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.

Post a Comment

1 Comments

  1. ರೂ. 1000 ಡು ಆನೆ ಕಟ್ಟ ಕಟ್ಟರೆ ಆಪುಂಡಾ???
    ಕಂಗ್‌ದ ತಲಕೆಲಾ ಊರುದಕುಲು ಕೊರೊಡಾವು... 😆

    ReplyDelete