ಕಸಾಯಿಖಾನೆಗೆ ಒಯ್ಯಲು ಗುಡ್ಡದಲ್ಲಿ ಕಟ್ಟಿ ಹಾಕಿದ್ದ ಗೋವುಗಳ ರಕ್ಷಣೆ

ಜಾಹೀರಾತು/Advertisment
ಜಾಹೀರಾತು/Advertisment

 ಕಸಾಯಿಖಾನೆಗೆ ಒಯ್ಯಲು ಗುಡ್ಡದಲ್ಲಿ ಕಟ್ಟಿ ಹಾಕಿದ್ದ ಗೋವುಗಳ ರಕ್ಷಣೆ

ಮೂಡುಬಿದಿರೆ : ಎಲ್ಲಿಂದಲೋ ಎರಡು ಗೋವುಗಳನ್ನು ಕದ್ದು ತಂದು ಕಸಾಯಿ ಖಾನೆಗೆ ಒಯ್ಯಲು  ತೋಡಾರು ಗ್ರಾಮದ  ಬಂಗಬೆಟ್ಟು ಶಾಲೆಯ ಹಿಂಭಾಗದ ಗುಡ್ಡದಲ್ಲಿ   ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವ ದನಗಳನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ರಕ್ಷಿಸಿ ಗೋಶಾಲೆಗೆ ಸಾಗಿಸಿದ್ದಾರೆ.

   ಕಸಾಯಿಖಾನೆಗೆ ಒಯ್ಯಲು ಗೋವುಗಳನ್ನು ಗುಡ್ಡದಲ್ಲಿ ಕಟ್ಟಿ ಹಾಕಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾಯ೯ಕತ೯ರು ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ ಸುಮಾರು 6 ಗಂಟೆಗೆ  ಸ್ಥಳಕ್ಕೆ ತೆರಳಿ  ಎರಡು ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

 ಪೊಲೀಸ್ ಇಲಾಖೆ  ಗೋವುಗಳನ್ನು ಕಟ್ಟಿ ಹಾಕಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆಯ ಮೂಡುಬಿದಿರೆ ತಾಲೂಕು ಸಹ ಸಂಯೋಜಕ ಶರತ್ ಮಿಜಾರ್  ಆಗ್ರಹಿಸಿದ್ದಾರೆ.

  ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖರಾದ  ಮನೀಶ್ ಮಿಜಾರ್, ಸುನಿಲ್, ಪ್ರವೀಣ್ ಮಿಜಾರ್, ಪ್ರಸಾದ್  ಮಿಜಾರ್ ಉಪಸ್ಥಿತರಿದ್ದರು.

Post a Comment

0 Comments