ಮೂಡುಬಿದಿರೆ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ಮನೆಗಳಿಗೆ ಹಾನಿ: ಅಪಾರ ನಷ್ಟ
ಮೂಡುಬಿದಿರೆ : ತಾಲೂಕಿನಾದ್ಯಂತ ವಿವಿದೆಡೆ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಕೆಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಶಿರ್ತಾಡಿ-ಹೊಸ್ಮಾರು ರಾಜ್ಯ ಹೆದ್ದಾರಿಯ ಮಾಂಟ್ರಾಡಿಯಲ್ಲಿ ಹೆದ್ದಾರಿಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ. ನೆಲ್ಲಿಕಾರು ಗ್ರಾಮದ ಬೋರುಗುಡ್ಡೆಯಲ್ಲಿ ಶೇಖರ ಪೂಜಾರಿ ಎಂಬವರ ಅಂಗಡಿಯ ಮೇಲೆ ಮರ ಉರುಳಿ ಬಿದ್ದಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ಇದೇ ಪರಿಸರದ ಪಿಜಿನ ಪೂಜಾರಿ, ಹರೀಶ್ ಜೈನ್ ಅವರ ಮನೆಗಳಿಗೆ ಮರ ಬಿದ್ದು ಹಾಗಿಯಾಗಿದೆ. ಗೇರು ಬೀಜ ಉದ್ಯಮದ ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಅಳಿಯೂರು ಬಸದಿಯ ಮೇಲ್ಚಾವಣಿಯ ಹೆಂಚುಗಳು ಹಾರಿಹೋಗಿವೆ.
ವಾಲ್ಪಾಡಿ ಗ್ರಾಮದಲ್ಲಿ ಪತ್ರಕರ್ತ ಅಶ್ರಫ್ ಅವರ ಮನೆಯ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಪಡುಮಾರ್ನಾಡು ಗ್ರಾಮದ ಮೂಡುಮಾನಾ೯ಡು ತಂಡ್ರಕೆರೆಯಲ್ಲಿ ಜಯಂತಿ ಹಾಗೂ ವಿಶ್ವನಾಥ್ ಎಂಬವರ ಮನೆಯ ಸಿಮೆಂಟ್ ಶೀಟ್ ಹಾರಿ ಹಾನಿಯಾಗಿದೆ.
0 Comments