ಹೊಟೇಲಿನ ತ್ಯಾಜ್ಯ ನೀರು ಕುಡಿಯುವ ನೀರಿನ ಬಾವಿಗಳಿಗೆ
*ಅಳಲು ತೋಡಿಕೊಂಡ ಮನೆ ಮಂದಿ : ಅಧಿಕಾರಿಗಳು ಮೌನ
ಮೂಡುಬಿದಿರೆ : ಮನೆಯ ಪಕ್ಕದಲ್ಲಿರುವ ಹೊಟೇಲಿನ ತ್ಯಾಜ್ಯ ನೀರು ಬಾವಿಗಳಿಗೆ ಸೇರುತ್ತಿರುವುದರಿಂದ ಕುಡಿಯಲು ಅಯೋಗ್ಯ ವಾಗಿದ್ದು ಈ ಬಗ್ಗೆ ಪುರಸಭೆ ಸಹಿತ ವಿವಿಧ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಅವರು ಮೌನವಾಗಿದ್ದಾರೆಂದು ಗಾಂಧಿನಗರ ಪ್ರದೇಶದ ಜನರು ಆರೋಪಿಸಿದ್ದಾರೆ.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರ ಪ್ರದೇಶದ ನಾರಾಯಣ ಅವರ ಮನೆಯ ಕುಡಿಯುವ ನೀರಿನ ಬಾವಿಗೆ "ಪಂಚಮಿ" ಎಂಬ ಹೆಸರಿನ ಹೊಟೇಲಿನ ತ್ಯಾಜ್ಯ ನೀರು ಕಳೆದ ನಾಲ್ಕು ವರುಷಗಳಿಂದ ಸೇರುತ್ತಿರುವುದರಿಂದ ಕುಡಿಯಲು ಆಯೋಗ್ಯವಾಗಿದೆ. ಆ ಬಾವಿಯ ನೀರನ್ನು ಐದು ಕುಟುಂಬಗಳು ಉಪಯೋಗಿಸುತ್ತಾ ಬಂದಿರುತ್ತಾರೆ. ಬಾವಿಯ ನೀರು ಕಲುಷಿತಗೊಂಡಿದ್ದರಿಂದ ನೀರು ವಾಸನೆ ಬೀರುತ್ತಿತ್ತು ಇದರಿಂದಾಗಿ ನೀರು ಕುಡಿಯಲು ಮತ್ತು ಇತರ ಕೆಲಸಗಳಿಗೆ ಬಳಕೆ ಮಾಡು ಸಾಧ್ಯವಾಗದೆ ಇದ್ದುದರಿಂದ ನಾರಾಯಣ ಅವರು ಮತ್ತೊಂದು ಬಾವಿಯನ್ನು ತೋಡಿದರು ಆದರೆ ಇದೀಗ ಆ ಬಾವಿಯ ನೀರು ಕೂಡಾ ಕಲುಷಿತಗೊಂಡಿದ್ದು ಕುಡಿಯಲು ಮತ್ತು ಮನೆ ಬಳಕೆಗೆ ಸೂಕ್ತವಾಗಿಲ್ಲ.
ಈ ಬಗ್ಗೆ ನಾರಾಯಣ ಅವರು ಪುರಸಭೆಗೆ ದೂರು ನೀಡಿದಾಗ ಪರಿಶೀಲಿಸಿದ ಅಧಿಕಾರಿಗಳು ಬಾವಿಗೆ ಪಂಚಮಿ ಹೋಟೇಲ್‌ನ ತ್ಯಾಜ್ಯ ನೀರಿನ ಒಸರಿನಿಂದಾಗಿ ಬಾವಿಯ ನೀರು ಕಲುಷಿತಗೊಂಡಿರುವ ಬಗ್ಗೆ ಪರಿಶೀಲಿಸಿ ಮೌಖಿಕವಾಗಿ ಸೂಕ್ತ ವ್ಯವಸ್ಥೆ ಮಾಡುವಂತೆ ಹೊಟೇಲ್ ನವರಿಗೆ ಸೂಚಿಸಿದ್ದಲ್ಲದೆ ನೀಡಿದ ಕಾಲಾವಕಾಶದೊಳಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶುದ್ದೀಕರಣ ಘಟಕ ಸ್ಥಾಪನೆ ಮಾಡಿ ಉದ್ಯಮದ ತ್ಯಾಜ್ಯ ನೀರಿನ ಸಂಸ್ಕರಣೆಗೆ ಸಂಪರ್ಕ ಕಲ್ಪಿಸುವುದು ಹಾಗೂ ದೂರುದಾರರ ಬಾವಿ ನೀರನ್ನು ಸ್ವಚ್ಛಗೊಳಿಸಿ ಕೂಡುವ ವ್ಯವಸ್ಥೆ ಮಾಡತಕ್ಕದ್ದು. ಇಲ್ಲವಾದಲ್ಲಿ ತಮ್ಮ ಮೇಲೆ ಪುರಸಭಾ ಕಾಯ್ದೆಯಂತೆ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಆದರೆ ಈವರೆಗೆ ಹೊಟೇಲಿನವರು ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ ಅಲ್ಲದೆ ಪುರಸಭೆಯ ಅಧಿಕಾರಿಗಳು ಕೂಡಾ ಮತ್ತೆ ಕ್ರಮಕೈಗೊಂಡಿಲ್ಲವೆಂದ ನಾರಾಯಣ್ ಅವರು ತಾವು ಪುರಸಭೆಗೆ ಮಾತ್ರವಲ್ಲದೆ ದ. ಕ.ಜಿಲ್ಲಾಧಿಕಾರಿಗೆ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗೆ, ಜಿಲ್ಲಾ ನಾಗರಿಕ ಹಕ್ಕು ಜಾರಿ ನಿದೇ೯ಶನಾಲಯಕ್ಕೆ, ಜಿಲ್ಲಾ ನಗರಾಭಿವೃದ್ಧಿ ಇಲಾಖೆಗೆ, ಮೂಡುಬಿದಿರೆ ತಹಸೀಲ್ದಾರ್ತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೂ ದೂರು ನೀಡಿದ್ದೆವು ಆದರೆ ಪ್ರಯೋಜನವಾಗಿಲ್ಲವೆಂದರು.
ಪುರಸಭೆಯು ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ತಾವು ಪ್ರತಿದಿನ ಒಂದೊಂದು ಸಾವಿರ ಹಣಕೊಟ್ಟು ಟ್ಯಾಂಕ್ ಮೂಲಕ ನೀರು ತರಿಸಿ ಉಪಯೋಗಿಸಲಾಗುತ್ತಿದೆ ಬಡವರಾಗಿರುವ ತಮಗೆ ಹಣಕೊಟ್ಟು ನೀರು ತರಿಸಲು ಕಷ್ಟ ಸಾಧ್ಯವಾಗಿದೆ.
ತಮ್ಮ ಮನೆಯಲ್ಲಿ ವಿಕಲಚೇತನ ಹುಡುಗನಿದ್ದು ಆತನಿಗೂ ಅಧಿಕ ನೀರಿನ ಅವಶ್ಯಕತೆಯಿದೆ ಮತ್ತು ನಮ್ಮ ಧೈವಸ್ಥಾನದ ದೈವಗಳಿಗೂ ನೀರು ಇಡದಂತ್ತಾಗಿದೆ ಎಂದು ನಾರಾಯಣ ಅವರ ಪುತ್ರ ಮೋಹನ್ ಅವರು ತಿಳಿಸಿದ್ದಾರೆ.
ವರದಿ: ಪ್ರೇಮಶ್ರೀ ಕಲ್ಲಬೆಟ್ಟು
0 Comments