7ನೇ ತರಗತಿ ಕೇಂದ್ರೀಯ ಪಠ್ಯದಲ್ಲಿ ರಾಣಿ ಅಬ್ಬಕ್ಕನ ಕಥೆ
ಮೂಡುಬಿದಿರೆ : ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅಡಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿಇಆರ್‌ಟಿ), 7 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಿ ಹೆಸರಿನ ಹೊಸ ಇಂಗ್ಲಿಷ್ ಪುಸ್ತಕ ಪರಿಚಯಿಸಿದೆ. ಅದರಲ್ಲಿ ಕರ್ನಾಟಕದ ರಾಣಿ ಅಬ್ಬಕ್ಕಳ ಗ್ರಾಫಿಕ್ ಕಥೆಗಳನ್ನು ಸೇರಿಸಲಾಗಿದೆ.
ಸಮಗ್ರ ಭಾಷೆಯನ್ನು ಕಲಿಯುವ, ಆಲಿಸುವ, ಬರೆಯುವ, ಓದುವ, ಮಾತನಾಡುವ ಕೌಶಲ್ಯಗಳನ್ನು ಹೆಚ್ಚಿಸುವ ಪಠ್ಯತರ ಚಟುವಟಿಕೆಗಳನ್ನು ಈ ಪುಸ್ತಕ ಒಳಗೊಂಡಿದೆ. 'ಧೈರ್ಯಶಾಲಿ ಹೃದಯಗಳಿಗೆ ನಮನ' ಎನ್ನುವ ಯೂನಿಟ್‌ನಲ್ಲಿ ದೇಶದ ಸೈನಿಕರನ್ನು ಗೌರವಿಸುವ 'ಮೈ ಡಿಯರ್‌ಸೋಲ್ಟರ್ಸ್ ಕವಿತೆ' ಇದೆ ಮತ್ತು ಧೈರ್ಯ ಮತ್ತು ದೇಶಭಕ್ತಿಯನ್ನು ಸಾರಿದ ಉಳ್ಳಾಲದ ರಾಣಿ ಅಬ್ಬಕ್ಕನ ಕುರಿತಾದ ಒಂದು ಗ್ರಾಫಿಕ್ ಕಥೆಯನ್ನು ಸೇರಿಸಲಾಗಿದೆ. ಇದಲ್ಲದೆ, ರವೀಂದ್ರ ನಾಥ್ ಟ್ಯಾಗೋರ್, ರಸ್ಕಿನ್ ಬಾಂಡ್, ಹಗ್ ಲಾಫ್ಟಿಂಗ್, ಎಲಿಜಾ ಕುಕ್, ಹೆಲೆನ್ ಕೆಲ್ಲರ್ ಅವರ ಬರಹಗಳು ಇವೆ. ಜೊತೆಗೆ ಪರಿಸರ ಜಾಗೃತಿ ಮತ್ತು ದೇಶ ಪ್ರೇಮದ ಕಥೆಗಳನ್ನು ಸೇರಿಸಲಾಗಿದೆ.
ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ: ಅಬ್ಬಕ್ಕ ದೇವಿ ಉಳ್ಳಾಲದವರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ. ಉಳ್ಳಾಲದಲ್ಲಿ ಆಳ್ವಿಕೆ ಮಾಡುತ್ತಿದ್ದರು. ತನ್ನ ರಾಜ್ಯ ದಲ್ಲಿ ಪೋರ್ಚುಗೀಸ್ ದಾಳಿ ಹಿಮ್ಮೆಟ್ಟಿಸಿದರು. ಪೋರ್ಚುಗೀಸರು ಸೆರೆಮನೆಗೆ ಕಳುಹಿಸಿದಾ ಗಲೂಬಂಡಾಯ ಎದ್ದು ಹೋರಾಡಿ ಹುತಾತ್ಮರಾದರು ಎಂದು ಇತಿಹಾಸ ಹೇಳುತ್ತದೆ.
0 Comments