ಕುಡ್ಮಿ ಸಿಗ್ಮೋ -2025 : ವಸ್ತು ಪ್ರದಶ೯ನ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಕುಡ್ಮಿ ಸಿಗ್ಮೋ -2025 : ವಸ್ತು ಪ್ರದಶ೯ನ ಉದ್ಘಾಟನೆ

 


ಮೂಡುಬಿದಿರೆ: ಎಡಪದವಿನಲ್ಲಿ ಕುಡ್ಮಿ ಸಿಗ್ಮೋತ್ಸವ ಸಮಿತಿಯಿಂದ ಆಯೋಜಿಸಲಾದ ಕುಡ್ಮಿ ಸಿಗ್ಮೋ -2025 ಇದರ ವಸ್ತು ಪ್ರದರ್ಶನವನ್ನು ಗುರಿಕಾರರಾದ ಸಂಜೀವ ಗೌಡ ನೀರ್ಕೆರೆಯವರು ಶ್ಯಾವಿಗೆ ಮಣೆ ಒತ್ತುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಸಿಗ್ಮೋತ್ಸವದ ಸಮಿತಿ ಅಧ್ಯಕ್ಷ ಲೋಕನಾಥ ಗೌಡ, ಗೌರವಾಧ್ಯಕ್ಷ  ವಿಜಯ ಗೌಡ ಶಿಬ್ರಿಕೆರೆ, ಡಾ!ಮನೋಹರ ನೆಲ್ಲಿಜೆ, ಮಹಿಳಾ ಸಮಿತಿ ಅಧ್ಯಕ್ಷೆ ನಮಿತಾ ಜನಾರ್ದನ, ಗೋವಾದ ಕುಡುಂಬಿ ಸಮಾಜ ಮುಖಂಡ ಆನಂದ್ ವೇಳಿಪ್, ಕುಣಬಿ ಸಮಾಜ ಮುಖಂಡ ಮಂಜಪ್ಪ ಸಾಗರ, ಮತ್ತು ಕುಡ್ಮಿ ಸಿಗ್ಮೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಲಿಂಗಪ್ಪಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments