ಮಾ 29 : ಮೂಡುಬಿದಿರೆಗೆ ಆಗಮಿಸಲಿದೆ ರಾಮನವಮಿ ರಥಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

ಮಾ 29 : ಮೂಡುಬಿದಿರೆಗೆ ಆಗಮಿಸಲಿದೆ ರಾಮನವಮಿ ರಥಯಾತ್ರೆ

ಮೂಡುಬಿದಿರೆ: ಕೇರಳದ ಮಲ್ಲಪ್ಪುರಂ ಜಿಲ್ಲೆಯ ಚೆರುಕೋಡ್ ಆಂಜನೇಯ ಆಶ್ರಮದ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀರಾಮ ನವಮಿ ರಥಯಾತ್ರೆ ಮಾರ್ಚ್ 29ರಂದು ಶನಿವಾರ ಮೂಡುಬಿದಿರೆಗೆ ಆಗಮಿಸಲಿದೆ ಎಂದು  ಜೈನ ಮಠದ ಚಾರುಕೀರ್ತಿ ಭಟ್ಟಾರಕ

ಸ್ವಾಮೀಜಿ ತಿಳಿಸಿದರು.

 ಅವರು ಗುರುವಾರ  ಸಂಜೆ ಜೈನಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅಂದು ಸಂಜೆ 6 ಗಂಟೆಗೆ ಅಲಂಗಾರು ಕಟ್ಟೆ ಬಳಿ ರಥವನ್ನು ಸಾರ್ವಜನಿಕವಾಗಿ ಸ್ವಾಗತಿಸಲಾಗುವುದು. ಬಳಿಕ ರಥ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆಯೊಂದಿಗೆ ಜೈನಮಠಕ್ಕೆ ಆಗಮಿಸುವುದು. ನಂತರ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಜರಗುವ ಶನೈಶ್ವರ ಪೂಜಾ ಸ್ಥಳಕ್ಕೆ ರಥವನ್ನು ಬರಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಶ್ರೀರಾಮನ ಆದರ್ಶ, ಧರ್ಮ ಸಂದೇಶ  ಎಲ್ಲಾ ಕಡೆ ಪಸರಿಸಬೇಕೆಂಬ ಸದುದ್ದೇಶದಿಂದ ಕೇರಳದ ಚೆರುಕೋಡ್ ಆಂಜನೇಯಾಶ್ರಮದದಿAದ ಹೊರಡುವ ಈ ರಥಯಾತ್ರೆಯನ್ನು ಮೂಡುಬಿದಿರೆ ಜನತೆಯ ಅಪೇಕ್ಷೆ ಮೇರೆಗೆ ಇಲ್ಲಿಗೆ ಬರಮಾಡಿಕೊಳ್ಳಲಾಗುವುದು ಎಂದು ಹೇಳಿದರು. 

ಶ್ರೀರಾಮ ನವಮಿ ರಥಯಾತ್ರಾ ಸಮಿತಿ ಮೂಡುಬಿದಿರೆ ಇದರ ಸಂಚಾಲಕ ಎಂ.ಬಾಹುಬಲಿ ಪ್ರಸಾದ್, ಕಾರ್ಯದರ್ಶಿ ಶಾಂತರಾಮ ಕುಡ್ವ, ಪ್ರಮುಖರಾದ ದಯಾನಂದ ಪೈ, ಶಿವಭಂಡಾರ್ಕರ್, ರಾಘವೇಂದ್ರ ಭಂಡಾರ್ಕರ್

Post a Comment

0 Comments