ಸಲ್ಯೂಟ್ ದ ಸೈಲೆಂಟ್ ಸ್ಟಾರ್ : ಸಾಧಕ ಕೃಷಿಕ ಮಹೇಶ್ ಯು. ಎಸ್. ಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಸಲ್ಯೂಟ್ ದ ಸೈಲೆಂಟ್ ಸ್ಟಾರ್ : ಸಾಧಕ ಕೃಷಿಕ ಮಹೇಶ್ ಯು. ಎಸ್. ಗೆ ಸನ್ಮಾನ

ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ ವತಿಯಿಂದ ಶನಿವಾರದಂದು ಅಧ್ಯಕ್ಷೆ ಜೆಸಿ ಎಚ್‌ಜಿಎಫ್ ವರ್ಷಾ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ “ಸಲ್ಯೂಟ್ ದ ಸೈಲೆಂಟ್ ಸ್ಟಾರ್” ಕಾರ್ಯಕ್ರಮದಲ್ಲಿ  ಮಹೇಶ ಯು.ಎಸ್. ಅವರನ್ನು ಸನ್ಮಾನಿಸಲಾಯಿತು.


  ಕೃಷಿ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಶ್ರೀ ಮಹೇಶ ಅವರು ಬಿ.ಎಸ್‌ಸಿ ಕೃಷಿಯಲ್ಲಿ 3 ಚಿನ್ನದ ಪದಕಗಳು ಮತ್ತು ಎಂ.ಎಸ್‌ಸಿ ಕೃಷಿಯಲ್ಲಿ 2 ಚಿನ್ನದ ಪದಕಗಳನ್ನು ಗಳಿಸಿರುವ ಸಾಧಕ. 20 ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಇವರು 35 ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ರಬ್ಬರ್, ಬಾಳೆ, ಕೋಕೋ, ಮೆಣಸು ಮತ್ತು ಕಾಜು ಮುಂತಾದ ಬೆಳೆಗಳನ್ನು ಮಿಶ್ರ ಮತ್ತು ಅಂತರ ಬೆಳೆ ಪದ್ಧತಿಗಳ ಮೂಲಕ ಯಶಸ್ವಿಯಾಗಿ ಬೆಳೆಸುತ್ತಿದ್ದಾರೆ.


 ಕೃಷಿ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಯಿತು.

 ಉದ್ಯಮಿ ದಿನೇಶ್ ಕಾಮತ್, ಜತೆ ಕಾಯ೯ದಶಿ೯ ವೀಣಾ ಸಂತೋಷ್, ಉಪಾಧ್ಯಕ್ಷ ಉಮೇಶ್ ಪ್ರಸಾದ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಈ ಸಂದಭ೯ದಲ್ಲಿದ್ದರು.

Post a Comment

0 Comments