ಶಿವಪಾಡಿಯಲ್ಲಿ ಪಂಚ ಮೇಳಗಳ ಕಲರವ:ಶಿವಪಾಡಿ ವೈಭವದ ಕಾರ್ಯಾಲಯ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಶಿವಪಾಡಿಯಲ್ಲಿ ಪಂಚ ಮೇಳಗಳ ಕಲರವ:ಶಿವಪಾಡಿ ವೈಭವದ ಕಾರ್ಯಾಲಯ ಉದ್ಘಾಟನೆ

ಉಡುಪಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ದಿನಾಂಕ 22-02-2025 ಶನಿವಾರ ದಿಂದ 26-02-2025 ಬುಧವಾರದವರೆಗೆ ಯಕ್ಷಮೇಳ, ಕೃಷಿ ಮೇಳ, ಆಹಾರಮೇಳ, ಮನರಂಜನೆ ಮೇಳ, ಆರೋಗ್ಯ ಮೇಳ ಗಳನ್ನೊಳಗೊಂಡ ಶಿವಪಾಡಿ ವೈಭವ ಕಾರ್ಯಕ್ರಮ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಮತ್ತು ಶಿವಪಾಡಿ ವೈಭವ ಆಚರಣೆ ಸಮಿತಿ ಜಂಟಿ ನೇತೃತ್ವದಲ್ಲಿ ಜರಗಲಿದೆ. 

ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣಾ ಸಮಿತಿಯ ಕಾರ್ಯಾಲಯವನ್ನು  ದಿನಾಂಕ 25.01.2025 ಶನಿವಾರ ಸಾಯಂಕಾಲ 5.30 ಗಂಟೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಮಾನಂದ ಸ್ಮೃತಿ ಮಂಟಪದಲ್ಲಿ ಆಚರಣ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ  ಶ್ರೀ ಕೆ ರಘುಪತಿ ಭಟ್ ಉದ್ಘಾಟಿಸಿದರು.

ತದನಂತರ ಶಿವಪಾಡಿ ವೈಭವ ಕಾರ್ಯಕ್ರಮದ ರೂಪು ರೇಷೆಗಳ, ವಿವಿಧ ಸಮಿತಿಗಳ ಕಾರ್ಯ ಚಟುವಟಿಕೆ, ಇನ್ನಿತರ ವಿಚಾರಗಳ ಬಗ್ಗೆ ಸಾರ್ವಜನಿಕ  ಸಭೆ ಜರಗಿತು.


ಸಭೆಯಲ್ಲಿ ಮಾಜಿ ಶಾಸಕರು ಹಾಗೂ ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷರಾದ ಕೆ ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಇದರ ಅಧ್ಯಕ್ಷರಾದ ದಿನೇಶ್ ಪ್ರಭು, ಉದ್ಘಾಟಕರಾಗಿ ರಘುರಾಮರೆಡ್ಡಿ ಉದ್ಯಮಿ ಹುಬ್ಬಳ್ಳಿ, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಇದರ ಆಡಳಿತ ಮೊಕ್ತೇಸರರಾದ

 ಮಹೇಶ್ ಠಾಕೂರ್, ಸುಭಾಕರ್ ಸಾಮಂತ್ ಆಡಳಿತ ಮೊಕ್ತೇಸರರು, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ 

ಪ್ರಕಾಶ್ ಕುಕ್ಕೆಹಳ್ಳಿ ಪ್ರಧಾನ ಕಾರ್ಯದರ್ಶಿ, ಶಿವಪಾಡಿ ವೈಭವ ಆಚರಣ ಸಮಿತಿ ಇವರುಗಳು ಉಪಸ್ಥಿತರಿದ್ದರು.


ವಿವಿಧ ಸಮಿತಿಗಳ ಕಾರ್ಯದ ಬಗ್ಗೆ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್ ವಿವರಿಸಿದರು. ಈ ಸಂದರ್ಭದಲ್ಲಿ ಸತ್ಯಾನಂದ ನಾಯಕ್, ಅಧ್ಯಕ್ಷರು ಜನಜಾಗ್ರತಿ ವೇದಿಕೆ  ಉಡುಪಿ ತಾಲೂಕು, ಶ್ರೀಮತಿ ವಿಜಯಲಕ್ಷ್ಮಿ ನಗರಸಭಾ ಸದಸ್ಯರು ಸರಳೆಬೆಟ್ಟು ವಾರ್ಡು, ಮಂಜುನಾಥ್,  ಎಸ್ ಕೆ ಡಿ ಆರ್ ಡಿ ಪಿ, ಗೋಪಾಲ್ ಕೃಷ್ಣ ಪ್ರಭು, ಕಾರ್ಯದರ್ಶಿ  ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಇವರುಗಳು ಉಪಸ್ಥಿತರಿದ್ದರು.


ಗುರುರಾಜ್ ಅಧ್ಯಕ್ಷರು ಸ್ನೇಹ ಸಂಗಮ ಸರಳೆಬೆಟ್ಟು ಇವರು ಸ್ವಾಗತಿಸಿದರು, ಅನಂತ್ ನಾಯಕ್ ನಾಗರಾಜ್ ಕಾಮತ್  ಸಂಘಟನಾ ಕಾರ್ಯದರ್ಶಿ ಶಿವಪಾಡಿ ವೈಭವ ಆಚರಣ ಸಮಿತಿ ಕಾರ್ಯಕ್ರಮ ನಿರ್ವಹಣೆಗೈದರು,ರಾಧಾಕೃಷ್ಣ ಸಾಮಂತ್ ಕೃಷಿ ಮೇಳದ ತಯಾರಿಯ ಬಗ್ಗೆ ವಿವರಣೆ ನೀಡಿದರು.

Post a Comment

0 Comments